ಉತ್ತರ ಪ್ರದೇಶದ ಉನ್ನಾವೋದಲ್ಲಿ ಪ್ರೇಮಿಯ ಮನೆಯವರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಯುವಕನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದು ಮತ್ತು ಯುವಕ ನೋವಿನಿಂದ ನರಳುತ್ತಾ ದಯೆಗಾಗಿ ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ.
ವರದಿಗಳ ಪ್ರಕಾರ, ಸಂತ್ರಸ್ತ ಯುವಕ ಉನ್ನಾವೋ ಜಿಲ್ಲೆಯ ಮೌರನ್‌ವಾ ಪೊಲೀಸ್ ಠಾಣಾ ವ್ಯಾಪ್ತಿಯ ದುಂಡಿಕೇಡಾ ಗ್ರಾಮದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದಾಗ ಆಕೆಯ ಕುಟುಂಬದವರು ಆತನನ್ನು ಹಿಡಿದಿದ್ದಾರೆ. ಇದರಿಂದ ಕೋಪಗೊಂಡ ಹುಡುಗಿಯ ಸಂಬಂಧಿಕರು ಆತನ ಕೂಗಿಗೆ ಕ್ಯಾರೆ ಅನ್ನದೆ ದೊಣ್ಣೆಗಳಿಂದ ಮನಬಂದಂತೆ ಹೊಡೆದಿದ್ದಾರೆ.
ವೈರಲ್ ವಿಡಿಯೋದಲ್ಲಿ, ಯುವಕನು ನೆಲದ ಮೇಲೆ ಮಲಗಿ ನೋವಿನಿಂದ ಕಿರುಚುತ್ತಿರುವಾಗ ಪುರುಷ ಮತ್ತು ಮಹಿಳೆ ಆತನ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ. ಒಂದು ಹಂತದಲ್ಲಿ, “ನಾನು ಈಗ ಸಾಯುತ್ತೇನೆ” ಎಂದು ಆತ ಹೇಳುವುದು ಕೇಳಿಸುತ್ತದೆ, ಆದರೂ ಹಲ್ಲೆ ಮುಂದುವರಿಯುತ್ತದೆ. ಆಘಾತಕಾರಿಯಾಗಿ, ಮಹಿಳೆಯೊಬ್ಬಳು ದಾಳಿಕೋರರನ್ನು ಪ್ರೇರೇಪಿಸುತ್ತಾ, ಇನ್ನಷ್ಟು ಹೊಡೆಯಲು ಹೇಳುವುದು ಕೇಳಿಸುತ್ತದೆ.
ನಂತರ ಹುಡುಗಿಯ ಕುಟುಂಬವು ಆಕೆಯ ಪ್ರೇಮಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ, ಆದರೆ ಇನ್ನೂ ಯಾರನ್ನೂ ಬಂಧಿಸಿಲ್ಲ.
उन्नाव: प्रेमिका से मिलने पहुंचे युवक की लाठी-डंडों से पिटाई
युवती के परिजनों ने युवक की बेरहमी से की पिटाई
मारपीट का वीडियो सोशल मीडिया पर वायरल
युवती के परिजनों ने युवक के खिलाफ दर्ज कराई एफआईआर
मौरांवा थाना क्षेत्र के दूंदीखेड़ा गांव की घटना#Unnao… pic.twitter.com/r5JuuKtR0L
— भारत समाचार | Bharat Samachar (@bstvlive) March 26, 2025