
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ರಂದು ಸೋಮವಾರ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ವಹಿವಾಟು ಇರುತ್ತದೆ. ಹಣಕಾಸು ವರದಿ ವ್ಯತ್ಯಾಸಗಳನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಲ್ಲಾ ಬ್ಯಾಂಕುಗಳಿಗೆ RBI ನಿರ್ದೇಶನ ನೀಡಿದೆ.
ಮಾರ್ಚ್ 31 ರಂದು ರಂಜಾನ್ ಹಬ್ಬ ಇದೆ. ಹೀಗಾಗಿ ಮಿಜೋರಾಂ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ಬಹುತೇಕ ಎಲ್ಲಾ ರಾಜ್ಯಗಳಿಗೂ ಮಾರ್ಚ್ 31ರಂದು ರಜೆ ಇರಬೇಕಿತ್ತು. ಆದರೆ, ಅದೇ ದಿನ ಹಣಕಾಸು ವರ್ಷದ ಕೊನೆಯ ದಿನವಾಗಿರುವುದರಿಂದ ಸ್ವೀಕೃತಿ ಮತ್ತು ಪಾವತಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಸಂಬಂಧಿತ ಹಣಕಾಸು ವಹಿವಾಟಿನ ಲೆಕ್ಕವನ್ನು ಖಚಿತಪಡಿಸಿಕೊಳ್ಳಬೇಕಿರುವುದರಿಂದ ಈ ನಿರ್ದೇಶನ ನೀಡಿರುವುದಾಗಿ RBI ತಿಳಿಸಿದೆ. ಮಾರ್ಚ್ 31 ರಂದು ಎಂದಿನಂತೆ ವಹಿವಾಟು ಇರುತ್ತದೆ. ರಜೆ ಇರುವುದಿಲ್ಲ ಎಂದು ಹೇಳಲಾಗಿದೆ.