
ಚಿಕ್ಕಮಗಳೂರು: ವಾಟ್ಸಾಪ್ ನಲ್ಲಿ ಬಂದಿದ್ದ ಪಿಎಂ ಕಿಸಾನ್ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ್ದಕ್ಕೆ ಬ್ಯಾಂಕ್ ಖಾತೆಯಿಂದ 10.49 ಲಕ್ಷ ರೂ. ಕಡಿತಗೊಂಡಿದೆ. ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದು, ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಮಾರ್ಚ್ 20ರಂದು ವಾಟ್ಸಾಪ್ ಗ್ರೂಪ್ ನಲ್ಲಿ ಬಂದ ಪಿಎಂ ಕಿಸಾನ್ ಎಪಿಕೆ ಫೈಲ್ ಲಿಂಕ್ ಡೌನ್ಲೋಡ್ ಮಾಡಿದ್ದು, ಅವರ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂ. ಕಡಿತವಾಗಿದೆ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾರ್ವಜನಿಕರು ವಾಟ್ಸಾಪ್, ಫೇಸ್ ಬುಕ್ ಮೆಸೆಂಜರ್, ಟೆಲಿಗ್ರಾಂ, ಇನ್ ಸ್ಟಾಗ್ರಾಂ, ಇ-ಮೇಲ್ ಮೊದಲಾದ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಈ ರೀತಿಯ ವಿಶ್ವಾಸಾರ್ಹವಲ್ಲದ ಎಪಿಕೆ ಫೈಲ್ ಗಳನ್ನು ಸೂಕ್ತ ಪರಿಶೀಲನೆಗೆ ಒಳಪಡಿಸದೇ ಡೌನ್ಲೋಡ್ ಮಾಡಿಕೊಳ್ಳಬಾರದೆಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.