
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಸುಮಾರು 25 ಕೆಜಿಗೂ ಹೆಚ್ಚು ತೂಕದ ಪ್ಲಾಸ್ಟಿಕ್ ತಿಂದು ಹೊಟ್ಟೆ ಊದಿಕೊಂಡಿದ್ದರಿಂದ 15 ವರ್ಷದ ಗೂಳಿ ಮೃತಪಟ್ಟಿದೆ.
ಗೂಳಿಯ ಹೊಟ್ಟೆ ಊದಿಕೊಂಡು ಮಲಗಿರುವುದನ್ನು ಕಂಡ ವೀರಶೈವ ಸಮಾಜದ ಮುಖಂಡ ಬಸವರಾಜ್, ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ಸಂತೋಷ್, ಭಜರಂಗದಳ ಜಿಲ್ಲಾ ಸಹ ಸಂಯೋಜಕ ಶಾಮ್ ವಿ. ಗೌಡ ಹಾಗೂ ಕಾರ್ಯಕರ್ತರಾದ ವಿಶ್ವ ಆಚಾರ್, ಆಕಾಶ್, ಗೌತಮ್, ಪುನೀತ್, ಮಂಜು ಕೆಂಪನಹಳ್ಳಿ ಮೊದಲಾದವರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ.
ಸರ್ಕಾರಿ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಗೂಳಿ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ. 25 ಕೆಜಿಗೂ ಹೆಚ್ಚು ತೂಕದ ಪ್ಲಾಸ್ಟಿಕ್ ತಿಂದಿದ್ದರಿಂದ ಹೊಟ್ಟೆ ಊದಿಕೊಂಡು ಗೂಳಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.