
ನವಿಮುಂಬೈನ ನೆರುಲ್‌ನ ಶಿರ್ವಾನೆ ಎಂಐಡಿಸಿಯಲ್ಲಿರುವ ಶುಭದಾ ಪಾಲಿಮರ್ಸ್ ಕಂಪನಿಯ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಘಟನೆ ನಡೆದ ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಯಾವುದೇ ಸಾವು ನೋವು ಸಂಭವಿಸಿಲ್ಲ.
ಅಗ್ನಿ ಅವಘಡದ ದೃಶ್ಯಗಳಲ್ಲಿ ಕಾರ್ಖಾನೆಯಿಂದ ದಟ್ಟವಾದ ಕಪ್ಪು ಹೊಗೆ ಆವರಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
A massive fire broke out at Subodha Company in Shiravane MIDC, Navi Mumbai. Fire department teams are actively working to control the blaze, with 10 fire tenders deployed so far. As per initial reports, no casualties have been reported.#NaviMumbai #Fire #ShiravaneMIDC #Mumbai pic.twitter.com/JSfy8hu69B
— 𝗠𝗘𝗧𝗥𝗢 𝗖𝗜𝗧𝗬 𝗦𝗔𝗠𝗔𝗖𝗛𝗔𝗥 ❁ (@MetroSamachar) March 22, 2025