ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಭಾರತದಲ್ಲಿದ್ದು, ಮುಂಬೈಗೆ ಬಂದಿಳಿದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ನಟಿ, ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಪೇರಲೆ ಹಣ್ಣು ಮಾರುವ ಮಹಿಳೆಯ ಪ್ರಾಮಾಣಿಕತೆಯನ್ನು ಕಂಡು ಪ್ರೇರಣೆ ಪಡೆದಿದ್ದೇನೆ ಎಂದು ಹೇಳಿದ್ದಾರೆ.
ಮಾರ್ಚ್ 19 ರಂದು, ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಗಳು ಮತ್ತು ವೀಡಿಯೊಗಳ ಸರಣಿಯನ್ನು ಪೋಸ್ಟ್ ಮಾಡಿದ್ದಾರೆ, “ಇತ್ತೀಚೆಗೆ” ತಮ್ಮ ಜೀವನದ ಒಂದು ನೋಟವನ್ನು ನೀಡಿದ್ದಾರೆ. ಮಲ್ಟಿ-ಪಿಕ್ಚರ್ ಪೋಸ್ಟ್‌ನಲ್ಲಿನ ಮೊದಲ ವೀಡಿಯೊದಲ್ಲಿ ನಟಿ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ಇಂದು ನನಗೆ ತುಂಬಾ ಸ್ಫೂರ್ತಿ ಸಿಕ್ಕಿತು” ಎಂದು ಹೇಳಿದ್ದಾರೆ.
ಮುಂಬೈಗೆ ಮತ್ತು ನಂತರ ನ್ಯೂಯಾರ್ಕ್‌ಗೆ ಹೋಗುವ ದಾರಿಯಲ್ಲಿ ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಹೋಗುವಾಗ, ಅವರು ಪೇರಲೆ ಮಾರಾಟ ಮಾಡುವ ಮಹಿಳೆಯನ್ನು ನೋಡಿದ್ದು, ಅದು ಅವರ ನೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ನಟಿ ಮುಂದುವರೆದು, “ನಾನು ನಿಮ್ಮ ಎಲ್ಲ ಪೇರಲೆಗೆ ಎಷ್ಟು ?’ ಎಂದು ಕೇಳಿದೆ. ಅವರು 150 ರೂಪಾಯಿ ಎಂದು ಹೇಳಿದ್ದು, ನಾನು 200 ರೂಪಾಯಿ ನೋಟನ್ನು ನೀಡಿದೆ, ಮತ್ತು ಅವರು ನನಗೆ ಚಿಲ್ಲರೆ ನೀಡಲು ಪ್ರಯತ್ನಿಸಿದಾಗ, ‘ಬೇಡ, ದಯವಿಟ್ಟು ಇಟ್ಟುಕೊಳ್ಳಿ’ ಎಂದು ಹೇಳಿದೆ. ಅವರು ಪೇರಲೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದು, ಹಿಂತಿರುಗಿ ನನಗೆ ಎರಡು ಪೇರಲೆ ನೀಡಿದರು ! ಕಷ್ಟಪಟ್ಟು ದುಡಿಯುವ ಮಹಿಳೆ, ದಾನವನ್ನು ಬಯಸಲಿಲ್ಲ! ಅದು ನಿಜವಾಗಿಯೂ ನನ್ನನ್ನು ಭಾವುಕಳನ್ನಾಗಿ ಮಾಡಿತು” ಎಂದು ಹೇಳಿದ್ದಾರೆ.
ವೃತ್ತಿಪರವಾಗಿ, ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ SSMB 29 ಗಾಗಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರೊಂದಿಗೆ ತಮ್ಮ ಮೊದಲ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ.
View this post on Instagram