ನಿಮ್ಮ ಯುಪಿಐ ಖಾತೆಗೆ 2000 ರೂಪಾಯಿ ಬಂದಿದೆಯೇ ? ಹಾಗಾದ್ರೆ ಹುಷಾರಾಗಿರಿ. ವಂಚಕರು ಹೊಸ ರೀತಿಯ ವಂಚನೆ ವಿಧಾನವನ್ನು ಕಂಡುಹಿಡಿದಿದ್ದಾರೆ. ಇದಕ್ಕೆ ಜಂಪ್ ಡೆಪಾಸಿಟ್ ಸ್ಕ್ಯಾಮ್ ಅಂತಾರೆ.
ಈ ಸ್ಕ್ಯಾಮ್ನಲ್ಲಿ ವಂಚಕರು ಮೊದಲು ನಿಮ್ಮ ಖಾತೆಗೆ 2000-3000 ರೂಪಾಯಿ ಹಾಕ್ತಾರೆ. ನೀವು ನೋಟಿಫಿಕೇಶನ್ ನೋಡಿ ಯುಪಿಐ ಖಾತೆ ಚೆಕ್ ಮಾಡಲು ಹೋಗ್ತಿದ್ದಂತೆ, ವಂಚಕರು ಈಗಾಗಲೇ ನಿಮ್ಮ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ರಿಕ್ವೆಸ್ಟ್ ಕಳಿಸಿರುತ್ತಾರೆ. ನೀವು ಪಿನ್ ಎಂಟರ್ ಮಾಡ್ತಿದ್ದಂತೆ ನಿಮ್ಮ ಖಾತೆಯಿಂದ ಹಣ ವಿತ್ ಡ್ರಾ ಆಗುತ್ತೆ.
ಇದನ್ನು ತಪ್ಪಿಸುವುದು ಹೇಗೆ ?
- ಅಪರಿಚಿತ ನಂಬರ್ನಿಂದ ಹಣ ಬಂದ್ರೆ ತಕ್ಷಣ ಯುಪಿಐ ಆ್ಯಪ್ನಲ್ಲಿ ಚೆಕ್ ಮಾಡ್ಬೇಡಿ.
- ಅರ್ಧ ಗಂಟೆ ಅಥವಾ ಒಂದು ಗಂಟೆಯ ನಂತರ ಚೆಕ್ ಮಾಡಿ.
- ಮೊದಲು ತಪ್ಪು ಪಿನ್ ಎಂಟರ್ ಮಾಡಿ.
- ಯಾವುದೇ ವಂಚನೆ ಬಗ್ಗೆ 1930ಗೆ ದೂರು ನೀಡಿ.