ದರೋಡೆಗೆ ಬಂದವರ ಮೇಲೆ SUV ಚಾಲಕನಿಂದ ದಿಢೀರ್ ಗುಂಡಿನ ದಾಳಿ ; ದಿಕ್ಕಾಪಾಲಾಗಿ ಓಡಿದ ದುಷ್ಕರ್ಮಿಗಳು | Watch Video

ಮಧ್ಯರಾತ್ರಿ ಕತ್ತಲಲ್ಲಿ ನಡೆದ ದರೋಡೆ ಯತ್ನವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಮೂವರು ಸಶಸ್ತ್ರ ದರೋಡೆಕೋರರು ಎಸ್‌ಯುವಿಯೊಂದನ್ನು ದೋಚಲು ಯತ್ನಿಸಿದಾಗ, ಎಸ್‌ಯುವಿ ಚಾಲಕ ದಿಢೀರ್ ಆಗಿ ಪ್ರತಿದಾಳಿ ನಡೆಸಿದ್ದಾನೆ. ಈ ರೋಚಕ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ವಿಡಿಯೋದಲ್ಲಿ, ಕಪ್ಪು ಬಣ್ಣದ ಎಸ್‌ಯುವಿ ರಸ್ತೆಯ ಬದಿಯಲ್ಲಿ ನಿಂತಿರುವಾಗ, ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಬಂದ ಮೂವರು ದರೋಡೆಕೋರರು ಎಸ್‌ಯುವಿಯನ್ನು ಸುತ್ತುವರೆದು ದರೋಡೆಗೆ ಯತ್ನಿಸುತ್ತಾರೆ. ಆದರೆ, ಎಸ್‌ಯುವಿ ಚಾಲಕ ದಿಢೀರ್ ಆಗಿ ಗುಂಡಿನ ದಾಳಿ ನಡೆಸುತ್ತಾನೆ. ಇದರಿಂದ ಗಾಬರಿಗೊಂಡ ದರೋಡೆಕೋರರು ದಿಕ್ಕಾಪಾಲಾಗಿ ಓಡಿಹೋಗುತ್ತಾರೆ.

ಗುಂಡಿನ ದಾಳಿಯಿಂದಾಗಿ ಒಬ್ಬ ದರೋಡೆಕೋರ ಗಾಯಗೊಂಡು ನೆಲಕ್ಕೆ ಬೀಳುತ್ತಾನೆ. ಉಳಿದ ಇಬ್ಬರು ದರೋಡೆಕೋರರು ಮತ್ತು ಹ್ಯಾಚ್‌ಬ್ಯಾಕ್ ಚಾಲಕ ಕೂಡಲೇ ಸ್ಥಳದಿಂದ ಪರಾರಿಯಾಗುತ್ತಾರೆ. ಎಸ್‌ಯುವಿ ಚಾಲಕ ಮಾತ್ರ ಗುಂಡು ಹಾರಿಸುತ್ತಲೇ ಇರುತ್ತಾನೆ. ನಂತರ ಎಸ್‌ಯುವಿಯನ್ನು ಹ್ಯಾಚ್‌ಬ್ಯಾಕ್ ಕಾರಿನ ದಿಕ್ಕಿನಲ್ಲಿ ಚಲಾಯಿಸುತ್ತಾನೆ.

ನೆಲಕ್ಕೆ ಬಿದ್ದ ಗಾಯಗೊಂಡ ದರೋಡೆಕೋರ ನೋವಿನಿಂದ ನರಳುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಸ್‌ಯುವಿ ಚಾಲಕನ ದಿಟ್ಟತನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ದರೋಡೆಕೋರರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read