ಮಡಕೆ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಡಕೆಯಲ್ಲಿ ನೀರನ್ನು ಶೇಖರಿಸಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಮಡಕೆ ನೀರು ನೈಸರ್ಗಿಕವಾಗಿ ತಂಪಾಗಿರುತ್ತದೆ. ಫ್ರಿಡ್ಜ್ ನೀರಿಗಿಂತ ಇದು ದೇಹಕ್ಕೆ ಹೆಚ್ಚು ಆಹ್ಲಾದಕರವಾಗಿರುತ್ತದೆ. ಮಣ್ಣಿನ ಮಡಕೆ ಕ್ಷಾರೀಯ ಗುಣವನ್ನು ಹೊಂದಿರುವುದರಿಂದ, ಇದು ದೇಹದಲ್ಲಿನ pH ಮಟ್ಟವನ್ನು ಕಾಪಾಡುತ್ತದೆ. ಇದರಿಂದ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ದೂರವಾಗುತ್ತವೆ.
ಮಡಕೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಮಣ್ಣಿನ ಮಡಕೆಗಳಲ್ಲಿ ಖನಿಜಾಂಶಗಳು ಸಮೃದ್ಧವಾಗಿರುವುದರಿಂದ, ನೀರು ಕೂಡಾ ಖನಿಜಾಂಶಗಳನ್ನು ಹೊಂದಿರುತ್ತದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳು ಮಡಕೆ ನೀರಿನಲ್ಲಿ ಇರುವುದಿಲ್ಲ. ಮಡಕೆ ನೀರು ಗಂಟಲಿಗೆ ಒಳ್ಳೆಯದು, ಶೀತ, ಕೆಮ್ಮು ಮತ್ತು ಅಸ್ತಮಾದಿಂದ ಬಳಲುತ್ತಿರುವವರು ಮಡಕೆ ನೀರನ್ನು ಕುಡಿಯುವುದು ಉತ್ತಮ. ಮಡಿಕೆ ನೀರು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಹೀಗೆ ಹಲವು ಆರೋಗ್ಯಕರ ಅಂಶಗಳನ್ನು ಮಡಿಕೆ ನೀರು ಹೊಂದಿರುತ್ತದೆ.
ಆದರೆ, ಮಡಕೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಿಯಮಿತವಾಗಿ ಮಡಕೆಯನ್ನು ಸ್ವಚ್ಛಗೊಳಿಸಿ ಮತ್ತು ಶುದ್ಧ ನೀರನ್ನು ಬಳಸಿ.