ಮನೆಯ ಸುತ್ತಲೂ ಬಳಸುವ ಅನೇಕ ವಸ್ತುಗಳು ಚಿಕ್ಕ ಮಕ್ಕಳಿಗೆ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು. ಆದ್ದರಿಂದ ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಒಳಿತು.
ಕೇರಳದ ಪಾಲಕ್ಕಾಡ್’ನ ಅಗಳಿಯಲ್ಲಿ ನಡೆದ ದುರಂತ ಘಟನೆಯಲ್ಲಿ, ಮೂರು ವರ್ಷದ ಬಾಲಕಿ ಟೂತ್ ಪೇಸ್ಟ್ ಅಂತ ಇಲಿ ಪಾಷಾಣವನ್ನು ತೆಗೆದುಕೊಂಡು ಹಲ್ಲುಜ್ಜಿದೆ.
ಆಕೆಯನ್ನು ತಕ್ಷಣ ಕೊಟ್ಟತ್ತರ ಬುಡಕಟ್ಟು ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕೊಟ್ಟಾಯಂ ವೈದ್ಯಕೀಯ ಕಾಲೇಜು ಮತ್ತು ತಿರುವನಂತಪುರಂ ಶ್ರೀ ಚಿತ್ರಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯ ಹೊರತಾಗಿಯೂ, ನೇಹಾ ರೋಸ್ ವಿಷಕ್ಕೆ ಬಲಿಯಾಗಿದ್ದಾರೆ. ಲಿಥಿನ್ ಮತ್ತು ಜೊಮಾರಿಯಾ ದಂಪತಿಯ ಮಗಳು ನೇಹಾ ರೋಸ್ ಎಂಬ ಬಾಲಕಿ ಮೃತಪಟ್ಟಿದೆ.ಬ್ಲೀಚ್ ಮತ್ತು ಡಿಟರ್ಜೆಂಟ್ ಗಳಂತಹ ಮನೆ ಸ್ವಚ್ಛಗೊಳಿಸುವ ಉತ್ಪನ್ನಗಳು ನುಂಗಿದರೆ ಅಥವಾ ಉಸಿರಾಡಿದರೆ ವಿಷಕಾರಿ ಮತ್ತು ಮಾರಣಾಂತಿಕವಾಗಬಹುದು. ಅಡುಗೆಮನೆಯ ಚಾಕುಗಳು ಮತ್ತು ಕತ್ತರಿಗಳಂತಹ ಚೂಪಾದ ವಸ್ತುಗಳನ್ನು ಮಕ್ಕಳ ಕೈಗೆಟುಕುವಂತೆ ಬಿಟ್ಟರೆ ಅಪಾಯವನ್ನುಂಟುಮಾಡುತ್ತದೆ.