
ಬೆಂಗಳೂರು: ವೈದ್ಯೆಯೊಬ್ಬರು ತನ್ನ ವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಡಾ.ಪ್ರಿಯದರ್ಶಿನಿ, ತನ್ನ ಮಾವ ನರಸಿಂಹಯ್ಯ (79) ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
2007ರಲ್ಲಿ ನರಸಿಂಹಯ್ಯ ಮಗ ಪ್ರಿಯದರ್ಶಿನಿ ಅವರನ್ನು ವಿವಾಹವಾಗಿದ್ದ. ದಂಪತಿಗೆ ಮಕ್ಕಳಿದ್ದಾರೆ. ಆದಾಗ್ಯೂ ದಾಂಪತ್ಯದಲ್ಲಿ ಪತಿ-ಪತ್ನಿ ನಡುವೆ ಬಿರುಕು ಮೂಡಿದೆ. ಕೋರ್ಟ್ ನಲ್ಲಿ ವಿಚ್ಛೇದನ ಕುರಿತ ಅರ್ಜಿ ವಿಚಾರಣೆ ನಡೆಯುತ್ತಿದೆ. ತೀರ್ಪು ಪ್ರಕಟವಾಗುವವರೆಗೂ ಭೇಟಿಯಾಗದಂತೆ ಕೋರ್ಟ್ ಸೂಚಿಸಿತ್ತು. ಆದಾಗ್ಯೂ ಪ್ರಿಯದರ್ಶಿನಿ ತನ್ನ ಅತ್ತೆ-ಮಾವನ ಮನೆಗೆ ಬಂದು ಹಲ್ಲೆ ನಡೆಸಿದ್ದಾರೆ. ಅವಾಚ್ಯವಾಗಿ ನಿಂದಿಸಿದ್ದಾರೆ. ಅತ್ತೆ ಮೇಲೆ ಹಲ್ಲೆ ನಡೆಸಲು ಮುಂದಾದ ಪ್ರಿಯದರ್ಶಿನಿಯನ್ನು ತಡೆಯಲು ಮಾವ ಹೋಗುತ್ತಿದ್ದಂತೆ ಮಾವ ನರಸಿಂಹಯ್ಯ ತಲೆ, ಬೆನ್ನಿಗೆ ಹೊಡೆದು ಹಲ್ಲೆ ಮಾಡಿದ್ದಾರೆ.
ಈ ಬಗ್ಗೆ ನರಸಿಂಹಯ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.