
ಮೈಸೂರು: ಮಹಿಳೆಯೊಬ್ಬಳು ಸ್ನೇಹಿತೆಯನ್ನೇ ಕೊಂದು ಆಕೆಯ ಕತ್ತಿನಲ್ಲಿದ್ದ ಚಿನ್ನದ ಸಗರವನ್ನು ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನ ಕೆ.ಸಿ.ಬಡಾವಣೆಯಲ್ಲಿ ನಡೆದಿದೆ.
ಸುಲೋಚನಾ (62) ಕೊಲೆಯಾದ ಮಹಿಳೆ. ಶಕುಂತಲಾ (42) ಸ್ನೇಹಿತೆಯನ್ನೇ ಕೊಂದ ಆರೋಪಿ. ಮೃತ ಸುಲೋಚನಾ ಹಾಗೂ ಶಕುಂತಲಾ ಒಂದೇ ಬಡಾವಣೆಯ ನಿವಾಸಿಗಳು. ಅಲ್ಲದೇ ಇಬ್ಬರು ಉತ್ತಮ ಸ್ನೇಹಿತೆಯರಾಗಿದ್ದರು. ಸುಲೋಚನಾ ಪೊಲೀಸ್ ಇಲಕಹೆ ನಿವೃತ್ತ ನೌಕರ ಗಂಗಣ್ಣ ಅವರ ಪತ್ನಿ
ಮಾ.5ರಂದು ಮನೆಗೆ ಬಂದ ಸುಲೋಚನಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಶಕುಂತಲಾ, ಅವರ ಕತ್ತಿನಲ್ಲಿದ್ದ ಚಿನ್ನದ ಸಗರವನ್ನು ಕದ್ದಿದ್ದಾರೆ. ಬಳಿಕ ಸುಲೋಚನಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಅಕ್ಕಪಕ್ಕದ ಅಮನೆಯವರನ್ನು ನಂಬಿಸಿದ್ದಾಳೆ. ಸುಲೋಚನಾ ಅವರ ಸರ ಕದ್ದ ಶಕುಂತಲಾ ಬಳಿಕ 1.5 ಲಕ್ಷಕ್ಕೆ ಗಿರವಿ ಇಟ್ಟಿದ್ದಾಳೆ.
ಅನುಮಾನಗೊಂಡ ಪೊಲೀಸರು ಶಕುಂತಲಾಳನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಮೈಸೂರಿನ ನಜಾರಾಬಾದ್ ಠಾಣೆ ಪೊಲೀಸರು ಶಕುಂತಳಾನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.