ಭಾರತದಲ್ಲಿ ನೆಲೆಸಿರುವ ಅಮೆರಿಕಾದ ಮಹಿಳೆಯೊಬ್ಬರು ಭಾರತದ 10 ವಿಶೇಷತೆಗಳನ್ನು ಅಮೆರಿಕಾದಲ್ಲಿಯೂ ಇರಬೇಕೆಂದು ಬಯಸಿದ್ದಾರೆ. ಕ್ರಿಸ್ಟನ್ ಫಿಶರ್ ಎಂಬುವವರು ಸುಮಾರು 4 ವರ್ಷಗಳ ಹಿಂದೆ ಭಾರತಕ್ಕೆ ಬಂದು ನೆಲೆಸಿದ್ದು, ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅವರು ಮೊದಲನೆಯದಾಗಿ, ಡಿಜಿಟಲ್ ಐಡಿ ಮತ್ತು ಯುಪಿಐ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. “ನಾನು ಕೇವಲ ಫೋನ್ನೊಂದಿಗೆ ಹೊರಗೆ ಹೋಗಬಹುದು, ಅದು ಸಾಕು. ಯುಪಿಐ ವ್ಯವಸ್ಥೆಯನ್ನು ಇಡೀ ಜಗತ್ತು ಅಳವಡಿಸಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಆಟೋ ಮತ್ತು ರಿಕ್ಷಾಗಳ ಲಭ್ಯತೆಯು “ಅಗ್ಗದ, ವೇಗದ ಮತ್ತು ಅನುಕೂಲಕರ” ಸಾರಿಗೆ ವ್ಯವಸ್ಥೆಯಾಗಿದೆ. ಭಾರತದಲ್ಲಿ ವೈದ್ಯರು ಸುಲಭವಾಗಿ ಲಭ್ಯವಿದ್ದು, ಹೆಚ್ಚಿನ ಬಾರಿ ಅಪಾಯಿಂಟ್ಮೆಂಟ್ ಅಗತ್ಯವಿಲ್ಲ ಮತ್ತು ಔಷಧಿಗಳಿಗೆ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ. ಸರ್ಕಾರದ ಕಡ್ಡಾಯ ತ್ಯಾಜ್ಯ ವಿಲೇವಾರಿ ಸೇವೆಯನ್ನು ಶ್ಲಾಘಿಸಿದ್ದಾರೆ, ಅಮೆರಿಕಾದಲ್ಲಿ ತ್ಯಾಜ್ಯ ಸೇವೆಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ನುರಿತ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಮತ್ತು ಸಹಾಯ ಪಡೆಯುವುದು ತುಂಬಾ ಅನುಕೂಲಕರವಾಗಿದೆ. ಭಾರತದಲ್ಲಿ ಲಭ್ಯವಿರುವ ವೈವಿಧ್ಯಮಯ ಆಹಾರವನ್ನು, ವಿಶೇಷವಾಗಿ ಸಸ್ಯಾಹಾರಿ ಆಯ್ಕೆಗಳನ್ನು ಹೊಗಳಿದ್ದಾರೆ. ಎಂಆರ್ಪಿ ಪರಿಕಲ್ಪನೆಯು “ಸೂಪರ್ ಅನುಕೂಲಕರ”ವಾಗಿದೆ ಮತ್ತು ಡೆಲಿವರಿ ಅಪ್ಲಿಕೇಶನ್ಗಳು ಭಾರತದಲ್ಲಿರುವುದು ತುಂಬಾ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕಾದ ಉದ್ಯಮಿಯೊಬ್ಬರು ದೆಹಲಿಯಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ವಾಸಿಸುತ್ತಿದ್ದು, ಇಲ್ಲಿನ ವ್ಯಾಪಾರ ಅವಕಾಶಗಳ ಬಗ್ಗೆ ತಿಳಿದುಕೊಂಡ ನಂತರ ಫಿಶರ್ ಮತ್ತು ಅವರ ಪತಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಭಾರತಕ್ಕೆ ಬರಲು ನಿರ್ಧರಿಸಿದರು. ಅವರು 2017 ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದರು ಮತ್ತು ದೇಶದ ಕುರಿತು ಆಕರ್ಷಿತರಾದರು. 2021 ರಲ್ಲಿ ಭಾರತಕ್ಕೆ ಸ್ಥಳಾಂತರಗೊಂಡಿದ್ದು ಹಿಂದಿ ಕಲಿತರು. ಈಗ ದಂಪತಿಗಳು ಭಾರತದಲ್ಲಿ ಮೂರು ಮಕ್ಕಳನ್ನು ಬೆಳೆಸುತ್ತಿದ್ದಾರೆ ಮತ್ತು ವೆಬ್ ಅಭಿವೃದ್ಧಿ ಕಂಪನಿಯನ್ನು ನಡೆಸುತ್ತಿದ್ದಾರೆ.
View this post on Instagram