
ನವದೆಹಲಿ: ಅಡುಗೆ ಎಣ್ಣೆ ಆಮದು ಕುಸಿತವಾಗಿದೆ. ನಾಲ್ಕು ವರ್ಷದ ಕನಿಷ್ಠಕ್ಕೆ ಆಮದು ಪ್ರಮಾಣ ಇಳಿಕೆಯಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ ತಿಳಿಸಿದೆ.
ಅತ್ಯುತ್ತಮ ಗುಣಮಟ್ಟದ ಅಡುಗೆ ಎಣ್ಣೆ ದರ ಏರಿಕೆಯಾಗಿರುವ ಪರಿಣಾಮ ಜನರ ಬಳಕೆ ಮತ್ತು ಬೇಡಿಕೆ ಕುಸಿತವಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಆಮದು ಪ್ರಮಾಣ ಫೆಬ್ರವರಿಯಲ್ಲಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ.
2024ರ ಫೆಬ್ರವರಿಯಲ್ಲಿ 9.58 ಲಕ್ಷ ಟನ್ ಗಳಷ್ಟು ಅಡುಗೆ ಎಣ್ಣೆ ಆಮದಾಗಿತ್ತು. ಈ ಫೆಬ್ರವರಿಯಲ್ಲಿ 8.85 ಲಕ್ಷ ಟನ್ ಅಡುಗೆ ಎಣ್ಣೆ ಆಮದಾಗಿದೆ. ಸೋಯಾ ಎಣ್ಣೆ ಆಮದು 2.08 ಲಕ್ಷ ಟನ್, ಸೂರ್ಯಕಾಂತಿ ಎಣ್ಣೆ ಆಮದು 2.28 ಲಕ್ಷ ಟನ್ ಕುಸಿದಿದೆ ಎಂದು ಹೇಳಲಾಗಿದೆ.
ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾ ಎಣ್ಣೆ ಆಮದು ಕುಸಿದ ಕಾರಣ ದೇಶದ ಅಡುಗೆ ಎಣ್ಣೆ ದಾಸ್ತಾನು ಮಾರ್ಚ್ 1ರ ವೇಳೆಗೆ ಶೇಕಡ 14ರಷ್ಟು ಕಡಿಮೆಯಾಗಿದ್ದು, 18.70 ಲಕ್ಷ ನಷ್ಟು ಇದೆ.