ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ವಿಡಿಯೋಗಳು ವೈರಲ್ ಆಗೋದು ಕಾಮನ್. ಆದ್ರೆ, ಇತ್ತೀಚೆಗೆ ಪಮಿರ್ ಅನ್ನೋ ಪರ್ವತಗಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯ್ತು. ಈ ಪರ್ವತಗಳು ಬೇರೆ ಬೇರೆ ದೇಶದ ಗಡಿಗಳಲ್ಲಿ ಹಬ್ಬಿಕೊಂಡಿವೆ. ನೋಡೋಕೆ ಸಿಕ್ಕಾಪಟ್ಟೆ ವಿಚಿತ್ರವಾಗಿದೆ.
ಪಮಿರ್ ಪರ್ವತಗಳನ್ನ “ವಿಶ್ವದ ಛಾವಣಿ” ಅಂತಾ ಕರೀತಾರೆ. ಇದು ಏಷ್ಯಾದ ಮಧ್ಯ ಮತ್ತು ದಕ್ಷಿಣ ಭಾಗದಲ್ಲಿ ಇದೆ. ಇದು ಹೆಚ್ಚಾಗಿ ತಜಕಿಸ್ತಾನದಲ್ಲಿ ಇದ್ದು, ಆದ್ರೆ ಚೀನಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಭಾಗಗಳಲ್ಲೂ ಆವರಿಸಿಕೊಂಡಿದೆ.
ಈ ಪರ್ವತಗಳು ಹಿಮಾಲಯ, ಕಾರಕೋರಂ, ಕುನ್ಲುನ್ ಮತ್ತು ಟಿಯೆನ್ ಶಾನ್ ಪರ್ವತಗಳ ಜೊತೆ ಸೇರಿಕೊಂಡಿವೆ. ಇಲ್ಲಿ ಎತ್ತರದ ಶಿಖರಗಳು, ಆಳವಾದ ಕಣಿವೆಗಳು ಮತ್ತು ದೊಡ್ಡ ಮೈದಾನಗಳು ಇದ್ದು, ಇಲ್ಲಿ ಬೇರೆ ಬೇರೆ ರೀತಿಯ ಪ್ರಾಣಿಗಳು, ಹಳೆಯ ವ್ಯಾಪಾರ ಮಾರ್ಗಗಳು ಮತ್ತು ಕಷ್ಟದ ವಾತಾವರಣದಲ್ಲಿ ವಾಸಿಸುವ ಜನರು ಇದ್ದಾರೆ.
ಯುನೆಸ್ಕೋ ಸಂಸ್ಥೆ ಇದನ್ನ “ವಿಶ್ವದ ಅತ್ಯಂತ ಪ್ರಸಿದ್ಧ ಪರ್ವತಗಳ ಜಾಗ” ಅಂತಾ ಹೇಳಿದೆ. ಇಲ್ಲಿ ಭೂಮಿಯ ಪ್ಲೇಟ್ ಗಳು ಡಿಕ್ಕಿ ಹೊಡೆದಿದ್ದರಿಂದ ಭೂಮಿ ವಿಚಿತ್ರವಾಗಿ ಕಾಣುತ್ತದೆ.
ಈ ವಿಡಿಯೋನ 9 ಮಿಲಿಯನ್‌ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಕೆಲವರಿಗೆ ಇದು ಭಯಾನಕವಾಗಿ ಕಂಡರೆ, ಕೆಲವರಿಗೆ ಸುಂದರವಾಗಿ ಕಂಡಿದೆ. ಇದನ್ನ ಲೈವ್ ಆಗಿ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ ಅಂತಾ ಒಬ್ಬರು ಕಾಮೆಂಟ್ ಮಾಡಿದ್ರೆ, ಇದು ಕ್ರಿಸ್ ನೋಲನ್ ಸಿನಿಮಾದ ದೃಶ್ಯದ ತರ ಇದೆ ಅಂತಾ ಇನ್ನೊಬ್ರು ಹೇಳಿದ್ದಾರೆ.
ನಾನು ಏನ್ ನೋಡ್ತಿದ್ದೀನಿ? ನನ್ನ ಕಣ್ಣುಗಳು ಮೋಸ ಮಾಡ್ತಿವೆ ಅಂತಾ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ನನಗೆ ಭಯ ಹುಟ್ಟಿಸುತ್ತೆ, ಇಂಥಾ ದೊಡ್ಡ ಬೆಟ್ಟಗಳನ್ನ ನೋಡಿದ್ರೆ ಭಯ ಆಗುತ್ತಾ? ಅಂತಾ ಕೆಲವರು ಭಯ ಪಟ್ಟಿದ್ದಾರೆ.
ನನ್ನ ಕಣ್ಣುಗಳಿಗೆ ಏನಾಗಿದೆ? ಎರಡು ಬೇರೆ ಬೇರೆ ದೃಶ್ಯಗಳು ಸೇರಿಕೊಂಡ ಹಾಗೆ ಕಾಣ್ತಿದೆ ಅಂತಾ ಕೆಲವರು ಗೊಂದಲ ವ್ಯಕ್ತಪಡಿಸಿದ್ರೆ, ಇದು ಭಯಾನಕವಾಗಿ ಸುಂದರವಾಗಿದೆ ಅಂತಾ ಕೆಲವರು ಹೇಳಿದ್ದಾರೆ.
ಇದು ಬೇರೆ ಲೋಕಕ್ಕೆ ಹೋಗೋ ದಾರಿಯ ತರ ಇದೆ ಅಂತಾ ಕೆಲವರು ಹೇಳಿದ್ರೆ, ಇದನ್ನ ನೋಡಿದ್ರೆ ತಲೆ ಸುತ್ತುತ್ತೆ ಅಂತಾ ಹಲವರು ಹೇಳಿದ್ದಾರೆ. ನನ್ನ ಮೆದುಳು ಇದನ್ನ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಪಡ್ತಿದೆ ಅಂತಾ ಕೆಲವರು ಹೇಳಿದ್ರೆ, ಇಲ್ಲ, ಇದು ನನ್ನ ತಾತ ಶಾಲೆಗೆ ಹೋಗೋ ದಾರಿ ಅಂತಾ ಕೆಲವರು ತಮಾಷೆ ಮಾಡಿದ್ದಾರೆ. ಈ ವಿಡಿಯೋ ಪರ್ವತಗಳ ಸೌಂದರ್ಯವನ್ನ ತೋರಿಸುತ್ತೆ.
View this post on Instagram