alex Certify ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿಗಳ ಆಗಮನ: 6 ಹುಲಿ ಮರಿಗಳ ಜನನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿಗಳ ಆಗಮನ: 6 ಹುಲಿ ಮರಿಗಳ ಜನನ

ಬೆಂಗಳೂರು: ಪ್ರಾಣಿಗಳ ಸರಣಿ ಸಾವಿನಿಂದ ಸೂತಕದ ಛಾಯೆ ಆವರಿಸಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮತ್ತೆ ಜೀವಕಳೆ ಬಂದಿದೆ. ಹೊಸ ಅತಿಥಿಗಳ ಆಗಮನವಾಗಿದೆ. ಹಿಮಾ ಹಾಗೂ ಆರುಣ್ಯ ಎಂಬ ಎರಡು ಹೆಣ್ಣು ಹುಲಿಗಳು 6 ಮರಿಗಳಿಗೆ ಜನ್ಮ ನೀಡಿವೆ.

ತಮಿಳುನಾಡಿನ ಅಣ್ಣಾ ಮೃಗಾಲಯದಿಂದ ತಂದಿದ್ದ ಬಿಳಿ ಹುಲಿ ವೀರ್ ಹಾಗೂ ಅರಣ್ಯಾ ಹೆಣ್ಣು ಹುಲಿ ಜೋಡಿಗೆ ಎರಡು ಮರಿಗಳು ಜನಿಸಿವೆ. ತಾಅಯಿ ಮತ್ತು ಮರಿಗಳು ಆರೋಗ್ಯವಾಗಿವೆ.

ಇನ್ನು ಮತ್ತೊಂದು ಹೆಣ್ಣು ಹುಲಿ ಹಿಮಾ ಇದೇ ಮೊದಲ ಬಾರಿಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಗಂಡು ಹುಲಿ ಸಂಜಯ್ ಹಿಮಾ ಜೋಡಿಯಾಗಿದ್ದು, ಈ ಜೋಡಿಗೆ 2024ರಲ್ಲಿ ಎರಡು ಮರಿಗಳು ಜನಿಸಿದ್ದವು. ಈ ಬಾರಿ ಹಿಮಾ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಆದರೆ ಈ ಬಾರಿ ಹಿಮ ತನ್ನ ಮರಿಗಳತ್ತ ಸುಳಿಯುತ್ತಿಲ್ಲ. ಹಾಗಾಗಿ ಉದ್ಯಾನವನದ ಆಸ್ಪತ್ರೆ ಸಿಬ್ಬಂದಿ ಮರಿಗಳಿಗೆ ಮೇಕೆ ಹಾಲು ನೀಡಿ ಪೋಷಣೆ ಮಡುತ್ತಿವೆ. ನಲ್ಕೂ ಮರಿಗಳು ಆರೋಗ್ಯವಾಗಿವೆ.

ಈ ವರ್ಷ ಬನ್ನೇರುಘಟ್ಟ ಉದ್ಯಾನವನದಲ್ಲಿ ಒಟ್ಟು 8 ಹುಲಿಮರಗಳ ಜನನವಾಗಿದ್ದು, ಸದ್ಯ ಹುಲಿಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...