
ಆಸ್ಪತ್ರೆಯ ವಾರ್ಡ್‌ನಲ್ಲಿ ಡಜನ್ ಗಟ್ಟಲೆ ಇಲಿಗಳು ಓಡಾಡುತ್ತಿರುವುದನ್ನು ತೋರಿಸುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಈ ದೃಶ್ಯವು ವೈರಲ್ ಆಗಿದೆ. ರೋಗಿಗಳ ಚೀಲಗಳು ಮತ್ತು ಇತರ ವಸ್ತುಗಳ ಮೇಲೆ ದೊಡ್ಡ ಇಲಿಗಳು ಓಡಾಡುವುದನ್ನು ಕಾಣಬಹುದಾಗಿದೆ. ಈ ವೀಡಿಯೊ ನೈರ್ಮಲ್ಯ ಮತ್ತು ಸಂಭಾವ್ಯ ಆರೋಗ್ಯ ಅಪಾಯಗಳ ಬಗ್ಗೆ ಗಂಭೀರ ಕಳವಳ ಉಂಟು ಮಾಡಿದೆ. ಜನರಲ್ ಆಸ್ಪತ್ರೆಯಲ್ಲಿನ ಭೀಕರ ಪರಿಸ್ಥಿತಿ ಬಿಂಬಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆ ಪ್ರಶ್ನಿಸುವಂತಿದೆ.
ವಾರ್ಡ್ ಹಾಸಿಗೆಯ ಬಳಿ ಬಿದ್ದಿದ್ದ ಚೀಲದ ಸುತ್ತಲೂ ಅನೇಕ ಇಲಿಗಳು ಓಡಾಡುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಇಲಿಗಳು ಒಟ್ಟುಗೂಡಿದ ಸ್ಥಳದ ಪಕ್ಕದಲ್ಲಿರುವ ಹಾಸಿಗೆಯ ಮೇಲೆ ಒಬ್ಬ ವ್ಯಕ್ತಿ ಗಾಢವಾಗಿ ನಿದ್ರಿಸುತ್ತಿರುವುದು ಕಂಡು ಬಂದಿದೆ. ಈ ಘಟನೆ ಮಧ್ಯಪ್ರದೇಶದ ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ನಡೆದಿದೆ ಎನ್ನಲಾಗಿದೆ.
ದೃಢೀಕೃತವಲ್ಲದ ವರದಿಗಳ ಪ್ರಕಾರ, ಈ ವಿಡಿಯೋ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಿಂದ ಬಂದಿದೆ, ಇದು ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುವ ಪ್ರದೇಶವಾಗಿದೆ. ಇಲಿಗಳು ತೊಂದರೆ ಉಂಟುಮಾಡುವುದಲ್ಲದೆ, ನವಜಾತ ಶಿಶುಗಳ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತಿವೆ ಎಂದು ರೋಗಿಗಳು ಹೇಳಿಕೊಂಡಿದ್ದಾರೆ.
Madhya Pradesh: In the tribal-dominated Mandla district, patients report a rising rat menace in the pediatric ward. The rodents not only cause trouble but also pose a serious threat to newborns’ safety. #MadhyaPradesh #HealthcareCrisis pic.twitter.com/ouzO4P31JL
— Ahmed Khabeer احمد خبیر (@AhmedKhabeeer) March 8, 2025