
ತುಮಕೂರು: ವ್ಹೀಲೀಂಗ್ ಪುಂಡರ ಅಟ್ಟಹಾಸಕ್ಕೆ ವ್ಯಕ್ತಿಯೋರ್ವವರು ಬಲಿಯಾಗಿರುವ ಘಟನೆ ತುಮಕೂರಿನ ಟೂಡಾ ಕಚೇರಿ ಬಳಿ ನಡೆದಿದೆ.
ತಿಪ್ಪೇಸ್ವಾಮಿ ಮೃತ ದುರ್ದೈವಿ. ಹೇಮಾದ್ರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದ ತಿಪ್ಪೇಸ್ವಾಮಿ ಬೆಳಿಗ್ಗೆ ಹಾಲು ತರಲೆಂದು ಅಂಗಡಿಗೆ ಹೋಗುತ್ತಿದ್ದಾಗ ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಬೈಕ್ ಡಿಕ್ಕಿಯಾಗಿದೆ.
ಅಪಘಾತದಲ್ಲಿ ತಿಪ್ಪೇಸ್ವಾಮಿ ಅವರ ತಲೆಗೆ ಹಾಗೂ ಕಾಲಿಗೆ ಗಂಭೀರವಾದ ಪೆಟ್ಟಾಗಿದೆ. ತಕ್ಷಣ ಅವರನ್ನು ತುಮಕೂರಿನ ಜಿಲ್ಲಾಸ್ಪರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದೇ ತಿಪ್ಪೇಸ್ವಾಮಿ ಕೊನೆಯುಸಿರೆಳೆದಿದ್ದಾರೆ.