ಬೆಳಗಾವಿ : ನರ್ಸಿಂಗ್ ಓದುತ್ತಿದ್ದ ಯುವತಿಯನ್ನು ಕಿಡ್ನ್ಯಾಪ್ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬಸ್ತವಾದ ಗ್ರಾಮದ ರಾಧಿಕಾ ಮುಚ್ಚಂಡಿ ಎಂಬ ಯುವತಿಯನ್ನು ಅನ್ಯಕೋಮಿನ ಯುವಕ ಸದ್ರುದ್ದೀನ್ ಕಿಡ್ನ್ಯಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. 17 ದಿನಗಳ ಹಿಂದೆ ಸದ್ರುದಿನ್ ಯುವತಿಯನ್ನು ಅಪಹರಿಸಿ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆ ಆಕ್ರೋಶಗೊಂಡ ಯುವತಿ ಕುಟುಂಬಸ್ಥರು ಯುವಕನ ಮನೆ ವಿರುದ್ಧ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸದ್ರುದ್ದೀನ್ ಮತ್ತು ನರ್ಸಿಂಗ್ ಓದುತ್ತಿದ್ದ ರಾಧಿಕಾ ನಡುವೆ ಸ್ನೇಹ ಬೆಳೆದಿತ್ತು, ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಈ ವಿಚಾರ ತಿಳಿದ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿದ ಸದ್ರುದ್ದೀನ್ ಕಿಡ್ನ್ಯಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.