BREAKING NEWS: KSRTC ಬಸ್ ನಲ್ಲೇ ನೌಕರ ಆತ್ಮಹತ್ಯೆ: ಡ್ಯೂಟಿ ಬದಲಿಸಿದ್ದಕ್ಕೆ ದುಡುಕಿನ ನಿರ್ಧಾರ

ಬೆಳಗಾವಿ: ಡ್ಯೂಟಿ ಬದಲಿಸಿದ್ದಕ್ಕೆ ಬಸ್ ನಲ್ಲಿಯೇ ಕೆಎಸ್ಆರ್ಟಿಸಿ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಡಿಪೋ 1ರ ಅಳ್ನಾವರ ಬಸ್ ನಲ್ಲಿ ನಡೆದಿದೆ.

ಬಸ್ ಒಳಗೆ ನೇಣು ಬಿಗಿದುಕೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57 ವರ್ಷದ ಕೇಶವ ಕಮಡೋಳಿ ಆತ್ಮಹತ್ಯೆ ಮಾಡಿಕೊಂಡರು. ಬಸ್ ವಾಷಿಂಗ್ ಬದಲು ಪಂಕ್ಚರ್ ಕೆಲಸಕ್ಕೆ ಡ್ಯೂಟಿ ಬದಲಿಸಿದ್ದರು ಎಂದು ಅಧಿಕಾರಿಗಳ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

ಕೇಶವ ಅವರು ಬೆಳಗಾವಿಯ ಹಳೆ ಗಾಂಧಿನಗರ ನಿವಾಸಿಯಾಗಿದ್ದಾರೆ. ಬೆನ್ನು ನೋವು ಇದ್ದರೂ ಕೇಶವ ಅವರಿಗೆ ಡ್ಯೂಟಿ ಬದಲಿಸಲಾಗಿದೆ. ಡ್ಯೂಟಿ ಬದಲಾವಣೆ ಮಾಡದಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಹೀಗಿದ್ದರೂ ಡ್ಯೂಟಿ ಬದಲಾವಣೆ ಮಾಡಿದ್ದರು. ಕೆಲಸದ ಒತ್ತಡ ತಡೆದುಕೊಳ್ಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read