
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಅನುಮತಿ ಪಡೆದ ಬಳಿಕ ಬಜ್ರೆಟ್ ಭಾಷಣ ಆರಂಭಿಸಿದ ಸಿಎಂ ಸಿದ್ದರಾಮಯ್ಯ, ಆಯವ್ಯಯ ಎಂಬುದು ಕೂಡಿ ಕಳೆಯುವ ಲೆಕ್ಕವೆಲ್ಲ. ರಾಜ್ಯದ 7 ಕೋಟಿ ಜನರ ಉಸಿರು. ರಾಜ್ಯದ ಜನತೆಯ ಭವಿಷ್ಯ ರೂಪಿಸುವ ಕೈಪಿಡಿ ಎಂಬ ಹೊಣೆಗಾರಿಕೆಯೊಂದಿಗೆ ಬಜೆಟ್ ಮಂಡಿಸಿಸುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದ ಪ್ರತಿ ಪ್ರಜೆಯ ಕನಸನ್ನು ಸಾಕಾರಗೊಳಿಸುವ, ನಾಳೆಯ ಬದುಕನ್ನು ಸದೃಢಗೊಳಿಸುವ ಹಾಗೂ ನುಡಿದಂತೆ ನಡೆಯುವ ಆಶಯದೊಂದಿಗೆ ಪ್ರಸ್ತಕ್ತ ಸಾಲಿನ ಬಜೆಟ್ ಮಂಡಿಸುತ್ತಿದ್ದೇನೆ. ನಮ್ಮ ಸಂಕಲ್ಪಗಳನ್ನು ಜನರ ಮುಂದಿಡುವ ದೊಡ್ಡ ಹೊಣೆಗಾರಿಕೆ ಮುಂದೆ ನಿಂತಿದ್ದೇನೆ ಎಂದರು.
ಸಿಬುದ್ಧ, ಬಸವ, ನಾರಾಯಣಗುರು ಅವರ ಆಶಯ. ಕುವೆಂಪು ಕವನದ ಮೂಲಕ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸಿದರು.