ತಾಲಿಬಾನ್ ಉಗ್ರರಿಂದ ಗುಂಡೇಟು ತಿಂದ ನಂತರ ಮೊದಲ ಬಾರಿಗೆ ನೊಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸುಫ್‌ಜೈ ತಮ್ಮ ತವರುಮನೆಗೆ ಭೇಟಿ ನೀಡಿದ್ದಾರೆ. ಈ ಭೇಟಿಯು ಕೇವಲ ಕುಟುಂಬ ಸದಸ್ಯರನ್ನು ಭೇಟಿಯಾಗುವುದಕ್ಕಷ್ಟೇ ಸೀಮಿತವಾಗಿದ್ದು, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅವರು ಸ್ಥಾಪಿಸಿದ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಮೂಲಕ ಮಹತ್ವ ಪಡೆದುಕೊಂಡಿದೆ.
ತಮ್ಮ ಭೇಟಿಯ ಸಮಯದಲ್ಲಿ ಮಲಾಲಾ ಅವರು, ಇಸ್ಲಾಮಾಬಾದ್‌ನಲ್ಲಿ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ತಮ್ಮ ಚಿಕ್ಕಪ್ಪ ಅವರನ್ನು ಭೇಟಿಯಾದರು. ಜೊತೆಗೆ, ತಮ್ಮ ಪೂರ್ವಜರ ಸ್ಮಶಾನಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ನಂತರ, 2018 ರಲ್ಲಿ ಬರ್ಕಾನಾದಲ್ಲಿ ತಾವು ಸ್ಥಾಪಿಸಿದ ಶಾಲೆ ಮತ್ತು ಕಾಲೇಜಿಗೆ ಭೇಟಿ ನೀಡಿದ್ದು, ಈ ಸಂಸ್ಥೆಯು ಸುಮಾರು 1,000 ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮಲಾಲಾ, ಉತ್ತಮ ಶಿಕ್ಷಣದ ಮಹತ್ವವನ್ನು ತಿಳಿಸಿ, ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣದ ಮೇಲೆ ಗಮನಹರಿಸುವಂತೆ ಪ್ರೋತ್ಸಾಹಿಸಿದರು.
2012 ರಲ್ಲಿ, ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಡಿದ ಮಲಾಲಾ ಅವರನ್ನು ತಾಲಿಬಾನ್ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಲು ಪ್ರಯತ್ನಿಸಿದ್ದರು. ಈ ಘಟನೆಯು ಅವರ ಮೇಲೆ ದೈಹಿಕ ಮತ್ತು ಭಾವನಾತ್ಮಕ ಗಾಯಗಳನ್ನುಂಟುಮಾಡಿತು. ಆದರೂ, ಮಲಾಲಾ ಅವರು ತಮ್ಮ ಹೋರಾಟವನ್ನು ಮುಂದುವರೆಸಿದರು. ಶಿಕ್ಷಣ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಜಾಗತಿಕ ಪ್ರತಿಮೆಯಾದರು.
ಈ ಭೇಟಿಯು ಮಲಾಲಾ ಅವರ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗಾಗಿ ಅವರು ನಡೆಸುತ್ತಿರುವ ಹೋರಾಟಕ್ಕೆ ಇದು ಮತ್ತಷ್ಟು ಪ್ರೇರಣೆ ನೀಡಿದೆ.
View this post on Instagram