ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಅಳವಡಿಸಲಾಗಿರುವ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿಗೆ ಬರುವ ಗ್ರಾಹಕರು ರಿಯಲ್ ಎಸ್ಟೇಟ್ ಅಥವಾ ರಾಜಕೀಯ ಚರ್ಚೆಗಳಲ್ಲಿ ತೊಡಗಬಾರದೆಂದು ಬೋರ್ಡ್ನಲ್ಲಿ ಸೂಚಿಸಲಾಗಿದೆ.
ದಕ್ಷಿಣ ಬೆಂಗಳೂರಿನ ರೆಸ್ಟೋರೆಂಟ್ನ ಗೋಡೆಯ ಮೇಲೆ ಅಂಟಿಸಲಾದ ಬೋರ್ಡ್ನ ಫೋಟೋವನ್ನು X ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಅದರಲ್ಲಿ, “ಇಲ್ಲಿನ ಪೀಠೋಪಕರಣಗಳು ಊಟೋಪಚಾರಕ್ಕೆ ಮಾತ್ರ, ಭೂ ವ್ಯವಹಾರ, ರಾಜಕೀಯ ನಿಷ್ಕರ್ಷೆಗಳಿಗೆ ಅಲ್ಲ. ದಯವಿಟ್ಟು ಅರ್ಥ ಮಾಡಿಕೊಂಡು ಸಹಕರಿಸಿ” ಎಂದು ಬರೆಯಲಾಗಿದೆ.
ಬೆಂಗಳೂರಿನ ಅನೇಕ ಉಪಹಾರ ಗೃಹಗಳಲ್ಲಿ ಜನರು ಗುಂಪುಗೂಡಿ ಆಸ್ತಿ-ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುತ್ತಾ, ರಿಯಲ್ ಎಸ್ಟೇಟ್ ಬಗ್ಗೆ ಚರ್ಚಿಸುವುದು ಸಾಮಾನ್ಯ ದೃಶ್ಯವಾಗಿದೆ. ಹೀಗಾಗಿ ಈ ರೀತಿ ಬರೆದಿರುವುದು ಸರಿ ಎಂದು ಬಹುತೇಕರು ಹೇಳಿದ್ದಾರೆ.
Clear instructions alright. pic.twitter.com/jMyuOOv1zX
— Farrago Metiquirke (@dankchikidang) March 4, 2025