ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾ ಐಷಾರಾಮಿ ಅಪಾರ್ಟ್ಮೆಂಟ್ಗಳಿಗೆ ಹೆಸರುವಾಸಿಯಾಗಿದೆ. ಈ ಕಟ್ಟಡದಲ್ಲಿರುವ ಅಪಾರ್ಟ್ಮೆಂಟ್ಗಳ ಬೆಲೆ ಕೇಳಿದರೆ ನಿಜಕ್ಕೂ ಬೆಚ್ಚಿಬೀಳುತ್ತೀರಿ.
ಬುರ್ಜ್ ಖಲೀಫಾದಲ್ಲಿ 1 ಬಿಎಚ್ಕೆ ಫ್ಲ್ಯಾಟ್ಗಳ ಬೆಲೆ 3.73 ಕೋಟಿ ರೂ.ನಿಂದ ಆರಂಭವಾಗುತ್ತದೆ. 2 ಬಿಎಚ್ಕೆ ಫ್ಲ್ಯಾಟ್ಗಳ ಬೆಲೆ 5.83 ಕೋಟಿ ರೂ., 3 ಬಿಎಚ್ಕೆ ಫ್ಲ್ಯಾಟ್ಗಳ ಬೆಲೆ 14 ಕೋಟಿ ರೂ. ಮತ್ತು ಇಲ್ಲಿನ ಅತಿ ದುಬಾರಿ ಪೆಂಟ್ಹೌಸ್ನ ಬೆಲೆ 2 ಬಿಲಿಯನ್ ಆಗಿದೆ.
ಬುರ್ಜ್ ಖಲೀಫಾ 2,716.5 ಅಡಿ (828 ಮೀಟರ್) ಎತ್ತರವಿದೆ. ಇದು 163 ಮಹಡಿಗಳು ಮತ್ತು 58 ಲಿಫ್ಟ್ಗಳನ್ನು ಹೊಂದಿದೆ. ಇಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ಗಳು, ರಿಟೇಲ್ ಅಂಗಡಿಗಳು ಮತ್ತು ರೆಸ್ಟೋರೆಂಟ್ಗಳಿವೆ. ಅರ್ಮಾನಿ ಹೋಟೆಲ್ ಮತ್ತು ಅರ್ಮಾನಿ ರೆಸಿಡೆನ್ಸಸ್ ಕೂಡ ಇಲ್ಲಿವೆ.
ಬುರ್ಜ್ ಖಲೀಫಾವನ್ನು ಎಮಾರ್ ಪ್ರಾಪರ್ಟೀಸ್ ನಿರ್ಮಿಸಿದೆ. ಎಮಿರೇಟಿ ಉದ್ಯಮಿ ಮೊಹಮ್ಮದ್ ಅಲಾಬಾರ್ ಇದರ ಮಾಲೀಕರಾಗಿದ್ದಾರೆ.