
ಹಾಸನ: ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.
ಜಮುನಾ (44) ಮೃತ ಮಹಿಳೆ. 10 ಲಕ್ಷ ರೂಪಾಯಿ ಸಾಲದ ಶ್ಯೂರಿಟಿಗೆ ಸಹಿ ಹಾಕುವಂತೆ ನಂದೀಶ್ ಹಾಗೂ ಧನುಶ್ರೀ ದಂಪತಿ ಜಮುನಾರನ್ನು ಪದೇ ಪದೇ ಒತ್ತಾಯಿಸುತ್ತಿದ್ದರಂತೆ. ಇದಕ್ಕೆ ಒಪ್ಪದಿದ್ದಾದ ಜಮುನಾ ಅವರ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಇದರಿಂದ ಮನನೊಂದ ಜಮುನಾ ಡೆತ್ ನೋಟ್ ಬರೆದಿಟ್ಟು, ದಂಪತಿ ಹೆಸರು ಉಲ್ಲೇಖಿಸಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಮೃತ ಜಮುನಾ ಪುತ್ರ ಸಾತ್ವಿಕ್ ಪೊಲೀಸರುಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.