ವಿಮಾನ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಸ್ಕೇಟರ್: ಭಾವನಾತ್ಮಕ ಪ್ರದರ್ಶನಕ್ಕೆ ಕಣ್ಣೀರಿಟ್ಟ ಮ್ಯಾಕ್ಸಿಮ್ ನೌಮೊವ್ | Watch Video

ಅಮೆರಿಕನ್ ಏರ್‌ಲೈನ್ಸ್ ವಿಮಾನ ದುರಂತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡ ಮ್ಯಾಕ್ಸಿಮ್ ನೌಮೊವ್, ತಮ್ಮ ಪೋಷಕರ ನೆಚ್ಚಿನ ಹಾಡಿಗೆ ಫಿಗರ್ ಸ್ಕೇಟಿಂಗ್ ಪ್ರದರ್ಶನ ನೀಡಿ ಭಾವುಕರಾದರು. ಈ ಭಾವುಕ ಕ್ಷಣಕ್ಕೆ ಫಿಗರ್ ಸ್ಕೇಟಿಂಗ್ ಕಾರ್ಯಕ್ರಮ ಸಾಕ್ಷಿಯಾಯಿತು.

1994 ರ ವಿಶ್ವ ಫಿಗರ್ ಸ್ಕೇಟಿಂಗ್ ಚಾಂಪಿಯನ್‌ಗಳಾದ ಎವ್ಗೆನಿಯಾ “ಝೆನ್ಯಾ” ಶಿಶ್ಕೋವಾ ಮತ್ತು ವಡಿಮ್ ನೌಮೊವ್ ಅವರ ಪುತ್ರ ಮ್ಯಾಕ್ಸಿಮ್ ನೌಮೊವ್, ಜನವರಿಯಲ್ಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನ ಅಪಘಾತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡರು. ಭಾನುವಾರ, 23 ವರ್ಷದ ಮ್ಯಾಕ್ಸಿಮ್, ತಮ್ಮ ಪೋಷಕರ ನೆಚ್ಚಿನ ಹಾಡಾದ “ದಿ ಸಿಟಿ ದಟ್ ಡಸಂಟ್ ಎಕ್ಸಿಸ್ಟ್” ಗೆ ಫಿಗರ್ ಸ್ಕೇಟಿಂಗ್ ಪ್ರದರ್ಶನ ನೀಡುವ ಮೂಲಕ ಭಾವುಕ ಗೌರವ ಸಲ್ಲಿಸಿದರು.

ಈ ಪ್ರದರ್ಶನದ ನಂತರ ಮ್ಯಾಕ್ಸಿಮ್ ಭಾವುಕರಾಗಿ ಕಣ್ಣೀರಿಟ್ಟರು. ಎಕ್ಸ್ ಬಳಕೆದಾರ ಕೋಲಿನ್ ರಗ್ಗ್ ಅವರು ಹಂಚಿಕೊಂಡ ವಿಡಿಯೋದಲ್ಲಿ, “ಡಿಸಿ ವಿಮಾನ ಅಪಘಾತದಲ್ಲಿ ತಮ್ಮ ಇಬ್ಬರು ಪೋಷಕರನ್ನು ಕಳೆದುಕೊಂಡ ಐಸ್ ಸ್ಕೇಟರ್ ಭಾವನಾತ್ಮಕ ಗೌರವದ ನಂತರ ಕಣ್ಣೀರು ಹಾಕಿದರು. 23 ವರ್ಷದ ಮ್ಯಾಕ್ಸಿಮ್ ನೌಮೊವ್ ತಮ್ಮ ಪೋಷಕರ ನೆಚ್ಚಿನ ಹಾಡು ‘ದಿ ಸಿಟಿ ದಟ್ ಡಸಂಟ್ ಎಕ್ಸಿಸ್ಟ್’ ಗೆ ಸ್ಕೇಟಿಂಗ್ ಮಾಡುವ ಮೂಲಕ ಗೌರವ ಸಲ್ಲಿಸಿದರು” ಎಂದು ಬರೆದಿದ್ದಾರೆ.

ತಮ್ಮ ಪೋಷಕರು ಈ ಹಾಡನ್ನು ಕೇಳಿದಾಗಲೆಲ್ಲಾ “ಒಟ್ಟಿಗೆ ನೃತ್ಯ ಮಾಡುವುದನ್ನು” ನೆನಪಿಸಿಕೊಳ್ಳುತ್ತಿದ್ದರು, ಹಾಗಾಗಿ ಮ್ಯಾಕ್ಸಿಮ್ ಈ ಹಾಡನ್ನು ಆಯ್ಕೆ ಮಾಡಿದ್ದರು. “ಲೆಗಸಿ ಆನ್ ಐಸ್” ಕಾರ್ಯಕ್ರಮದ ಸಮಯದಲ್ಲಿ ಮ್ಯಾಕ್ಸಿಮ್ ಭಾವನಾತ್ಮಕವಾಗಿ ಕಣ್ಣೀರಿಟ್ಟರು.

ಜನವರಿ 29 ರಂದು ನಡೆದ ವಿಮಾನ ಅಪಘಾತದಲ್ಲಿ ಕನಿಷ್ಠ 67 ಜನರು ಸಾವನ್ನಪ್ಪಿದ್ದರು. ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ನೊಂದಿಗೆ ವಾಣಿಜ್ಯ ವಿಮಾನ ಡಿಕ್ಕಿ ಹೊಡೆದಾಗ ಹಲವಾರು ಸ್ಕೇಟರ್‌ಗಳು ವಿಮಾನದಲ್ಲಿದ್ದರು. ನೌಮೊವ್ ಅವರ ಪೋಷಕರು ಮತ್ತು ಇತರ ಹಲವಾರು ಸ್ಕೇಟರ್‌ಗಳು ಕಾನ್ಸಾಸ್‌ನ ವಿಚಿತಾದಲ್ಲಿ ನಡೆದ ಯುಎಸ್ ಫಿಗರ್ ಸ್ಕೇಟಿಂಗ್ ರಾಷ್ಟ್ರೀಯ ಅಭಿವೃದ್ಧಿ ಶಿಬಿರದಲ್ಲಿ ಭಾಗವಹಿಸಿದ ನಂತರ ವಾಷಿಂಗ್ಟನ್ ಡಿಸಿಗೆ ಮರಳುತ್ತಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read