
ಬೆಂಗಳೂರು: ಪಟ್ಟದ ಫೈಟ್ ಮಧ್ಯೆ ಕಾಂಗ್ರೆಸ್ ಮನೆಯಲ್ಲಿ ಭಾರಿ ಬೆಳವಣಿಗೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಕೆ.ಎನ್. ರಾಜಣ್ಣ ನಡುವೆ ಜಟಾಪಟಿ ನಡೆದಿತ್ತು.
ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಡಿ.ಕೆ. ಶಿವಕುಮಾರ್ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಖರ್ಗೆ ಭೇಟಿ ಬೆನ್ನಲ್ಲೇ ಸಚಿವ ರಾಜಣ್ಣ ಅವರನ್ನು ಕೂಡ ಡಿಸಿಎಂ ಡಿಕೆ ಭೇಟಿಯಾಗಿದ್ದಾರೆ. ಇವರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ವಿಧಾನಸೌಧದಲ್ಲಿರುವ ರಾಜಣ್ಣ ಅವರ ಕೊಠಡಿಗೆ ಡಿಕೆ, ಲಕ್ಷ್ಮಣ ಸವದಿ ಭೇಟಿ ನೀಡಿದ್ದು, ತೀವ್ರ ಕುತೂಹಲ ಮೂಡಿಸಿದೆ.