ಸಾಮಾನ್ಯ ರೈಲು ಪ್ರಯಾಣ ಅಸಾಮಾನ್ಯ ಕ್ಷಣವಾಗಿ ಮಾರ್ಪಟ್ಟಿದೆ. ರೈಲಿನೊಳಗೆ ಮೊಬೈಲ್ ಕದಿಯುತ್ತಿದ್ದ ಕಳ್ಳನನ್ನು ಹಿಡಿದ ಘಟನೆ ವರದಿಯಾಗಿದೆ. ಈ ವೈರಲ್ ವೀಡಿಯೊವನ್ನು ಇತ್ತೀಚೆಗೆ ಘರ್ ಕೆ ಕಾಲೇಶ್ ಎಂಬ ಬಳಕೆದಾರರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. “ಭಾರತೀಯ ರೈಲ್ವೆಯೊಳಗೆ ಮೊಬೈಲ್ ಫೋನ್ ಕದಿಯುತ್ತಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ” ಎಂದು ಶೀರ್ಷಿಕೆ ನೀಡಲಾಗಿದೆ.
ರಿಷಿಕೇಶದಿಂದ ಕಾತ್ರಕ್ಕೆ ಹೋಗುವ ಹೇಮ್ಕುಂಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಕದಿಯುತ್ತಿದ್ದ ಕಳ್ಳನನ್ನು ಸಹ ಪ್ರಯಾಣಿಕರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕಳ್ಳ ನಕಲಿ ಪೇಟ ಮತ್ತು ನಕಲಿ ಪುಸ್ತಕಗಳನ್ನು ಇಟ್ಟುಕೊಂಡು ಪ್ರಯಾಣಿಕರನ್ನು ವಂಚಿಸುತ್ತಿದ್ದ.
ಕಳ್ಳ ಸಿಕ್ಕಿಬಿದ್ದ ತಕ್ಷಣ ಪ್ರಯಾಣಿಕರಿಗೆ ಬೆದರಿಕೆ ಹಾಕಲು ಶುರುಮಾಡಿದ. “ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ” ಎಂದು ಹೇಳುತ್ತಾ ಪ್ರಯಾಣಿಕರಿಗೆ ಹೆದರಿಸಲು ಪ್ರಯತ್ನಿಸಿದ. ಆದರೆ, ಪ್ರಯಾಣಿಕರು ಕಳ್ಳನ ನಾಟಕವನ್ನು ಬಯಲು ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ವೀಡಿಯೊ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವೈರಲ್ ಆಗಿದ್ದು, 190 ಕೆ ವೀಕ್ಷಣೆಗಳು ಮತ್ತು ಸಾವಿರಾರು ಲೈಕ್ಗಳನ್ನು ಗಳಿಸಿದೆ. ಕಳ್ಳನ ಕೃತ್ಯಕ್ಕೆ ನೆಟಿಜನ್ಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಕೆಲವರು ಕಳ್ಳನ ನಟನೆಯನ್ನು ನೋಡಿ ತಮಾಷೆಯ ಕಾಮೆಂಟ್ಗಳನ್ನು ಮಾಡಿದ್ದಾರೆ.
Thief got Caught stealing mobile phone inside Indian Railways pic.twitter.com/W5VfReH0cP
— Ghar Ke Kalesh (@gharkekalesh) March 3, 2025
