
ಭಾನುವಾರ ಮುಂಜಾನೆ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವೆಡೆ ಮೈಕ್ರೋಸಾಫ್ಟ್ ಔಟ್‌ಲುಕ್, ಮೈಕ್ರೋಸಾಫ್ಟ್ 365 ಹಾಗೂ ಇನ್ನಿತರ ಸೇವೆಗಳು ಸ್ಥಗಿತಗೊಂಡವು. ಇಮೇಲ್, ಎಕ್ಸೆಲ್, ಪವರ್‌ಪಾಯಿಂಟ್ ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡಿದ್ದರಿಂದ ಬಳಕೆದಾರರು ತೊಂದರೆ ಅನುಭವಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಮೈಕ್ರೋಸಾಫ್ಟ್ ತಂಡ ದೋಷವನ್ನು ಸರಿಪಡಿಸಿತು.
“ಕೋಡ್‌ನಲ್ಲಿನ ಬದಲಾವಣೆಯಿಂದ ಈ ಸಮಸ್ಯೆ ಉಂಟಾಗಿದೆ. ಸಮಸ್ಯೆಯನ್ನು ಗುರುತಿಸಿ ಕೂಡಲೇ ಸರಿಪಡಿಸಲಾಗಿದೆ. ಸೇವೆಗಳು ಪುನಃ ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿವೆ” ಎಂದು ಮೈಕ್ರೋಸಾಫ್ಟ್ 365 ತನ್ನ ‘ಎಕ್ಸ್’ ಖಾತೆಯಲ್ಲಿ ತಿಳಿಸಿದೆ. ಮೈಕ್ರೋಸಾಫ್ಟ್ ಎಕ್ಸ್‌ಚೇಂಜ್, ಮೈಕ್ರೋಸಾಫ್ಟ್ ಟೀಮ್ಸ್, ಮೈಕ್ರೋಸಾಫ್ಟ್ ಅಜುರೆ ಸೇವೆಗಳಿಗೂ ಅಡಚಣೆಯಾಗಿತ್ತು.
‘ಡೌನ್‌ಡಿಟೆಕ್ಟರ್’ ವರದಿಗಳ ಪ್ರಕಾರ, ಔಟ್‌ಲುಕ್‌ನಲ್ಲಿ 37,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ 24,000 ಬಳಕೆದಾರರು ಸಮಸ್ಯೆ ಎದುರಿಸಿದರು. ಮೈಕ್ರೋಸಾಫ್ಟ್ ಟೀಮ್ಸ್, ಅಜುರೆ ಸೇವೆಗಳಲ್ಲೂ ಕೆಲ ಸಮಸ್ಯೆಗಳು ಕಾಣಿಸಿಕೊಂಡವು. ಕಳೆದ ವಾರಗಳಲ್ಲಿಯೂ ಔಟ್‌ಲುಕ್ ಬಳಕೆದಾರರು ಸಮಸ್ಯೆ ಎದುರಿಸಿದ್ದರು.
Our telemetry indicates that a majority of impacted services are recovering following our change. We’ll keep monitoring until impact has been resolved for all services. Refer to MO1020913 or https://t.co/vB5FHDUOHj for more detailed information.
— Microsoft 365 Status (@MSFT365Status) March 1, 2025