
ಶ್ರೀನಗರ: ಒಂದೆಡೆ ಉತ್ತರಾಖಂಡದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಹಿಮ ಪರ್ವತ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಈ ನಡುವೆ ಜಮ್ಮು-ಕಾಶ್ಮೀರದಲ್ಲಿ ಹಿಮ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಕಳೆದ ಮೂರು ದಿನಗಳಿಂದ ಜಮ್ಮು-ಕಾಶ್ಮೀರದಾದ್ಯಂತ ಭಾರಿ ಮಳೆಯಾಗುತ್ತಿದೆ. ಮತ್ತೊಂದೆ ಹಿಮಪಾತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹಿಮಪಾತದಿಂದಾದಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ವಿವಿಧ ರಸ್ತೆಗಳಲ್ಲಿ ಸಾಂಚಾರ ಸ್ಥಗಿತಗೊಂಡಿದೆ.
ಮತ್ತೊಂದೆಡೆ ಜಮ್ಮು-ಕಾಶ್ಮೀರ ಉಧಂಪುರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ದುರಂತದಲ್ಲಿ ಮಹಿಳೆ ಹಾಗೂ ಆಕೆಯ ಮಗ ಇಬ್ಬರು ಸಾವನ್ನಪ್ಪಿದ್ದಾರೆ. ಮೌಂಗಾರಿ ಬಳಿ ಬೃಹತ್ ಬಂಡೆ ಕುಸಿದು ಬಿದ್ದು ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತಾಯಿ ಹಾಗೂ ಮಗ ಮೃತಪಟ್ಟಿದ್ದಾರೆ.
ಮೃತರನ್ನು ಶಾನೋ ದೇವಿ (50) ಹಾಗೂ ಅವರ ಮಗ ರಘು (25) ಎಂದು ಗುರುತಿಸಲಾಗಿದೆ.
ಇನ್ನೊಂದೆಡೆ ಕಥುವಾ ಜಿಲ್ಲೆಯ ರಾಜ್ ಬಾಗ್ ನಲ್ಲಿ ಉಜ್ ನದಿಯಲ್ಲಿ ಸಿಲುಕಿದ್ದ 11 ವಲಸೆ ಕಾರ್ಮಿಕರನ್ನು ವಿಪತ್ತು ನಿರ್ವಹಣಾ ತಂಡ, ಎಸ್ ಡಿ ಆರ್ ಎಫ್ ರಕ್ಷಿಸಿದೆ. ತಾವಿ ನದಿ ನೀರಿನಲ್ಲಿ ಸಿಲುಕಿದ್ದ ಗೋಲೆ-ಗುಜ್ರಾಲ್ ನಿವಾಸಿ ಮೋಹನ್ ಲಾಲ್ ಎಂಬಾತನನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.