ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ 2025 ರ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದ ನಂತರ ಅಭಿಮಾನಿಯೊಬ್ಬರು ತಮಗಾದ ಸಂತಸದಲ್ಲಿ ಕುಣಿದು ಸಂಭ್ರಮಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಕೊಹ್ಲಿ ಮೂರಂಕಿ ಗಡಿ ದಾಟಿದ ಕ್ಷಣದಲ್ಲಿ ಅಭಿಮಾನಿ ಜೋರಾಗಿ ಕಿರುಚುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ 242 ರನ್‌ಗಳ ಮಧ್ಯಮ ಗುರಿಯನ್ನು ಭಾರತಕ್ಕೆ ನೀಡಿದ ನಂತರ 36 ವರ್ಷದ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಶಹೀನ್ ಶಾ ಆಫ್ರಿದಿ 41 ನೇ ಓವರ್‌ನಲ್ಲಿ ವೈಡ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ಕೊಹ್ಲಿ ಶತಕವನ್ನು ತಡೆಯಲು ಪ್ರಯತ್ನಿಸಿ ದುಬೈನಲ್ಲಿ ಪ್ರೇಕ್ಷಕರಿಂದ ಛೀಮಾರಿ ಹಾಕಿಸಿಕೊಂಡರು.
ಆದಾಗ್ಯೂ, ಬಲಗೈ ಬ್ಯಾಟರ್ ಮುಂದಿನ ಓವರ್‌ನಲ್ಲಿ ಖುಷ್ದಿಲ್ ಶಾ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ 51 ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು ಮತ್ತು ಅದು ಗೆಲುವಿನ ರನ್ ಎಂದು ಸಾಬೀತಾಯಿತು.
Lmao same reaction 😂😂 pic.twitter.com/fIA6h5XDJb
— A (@_shortarmjab_) February 25, 2025