
ರಾವಲ್ಪಿಂಡಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭದ್ರತಾ ಲೋಪ ಉಂಟಾಗಿದೆ. ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭದ್ರತಾ ಲೋಪ ಉಂಟಾಗಿದೆ.
ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ಪಂದ್ಯ ನಡೆಯುವ ವೇಳೆ ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಪಂದ್ಯದ ವೇಳೆ ಅಕ್ರಮವಾಗಿ ಮೈದಾನಕ್ಕೆ ನುಗ್ಗಿದ ವ್ಯಕ್ತಿ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಅವರನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಅಕ್ರಮವಾಗಿ ಮೈದಾನ ಪ್ರವೇಶಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನಿಂಗ್ಸ್ ಸಮಯದಲ್ಲಿ ಫೋಟೋ ಹಿಡಿದುಕೊಂಡು ಮೈದಾನಕ್ಕೆ ಓಡಿದ ವ್ಯಕ್ತಿ ರನ್-ಚೇಸ್ ಸಮಯದಲ್ಲಿ ರಚಿನ್ ಕಡೆಗೆ ಹೋಗಿದ್ದಾನೆ. ಈ ವೇಳೆ ರಚಿನ್ ದೂರ ಸರಿದಿದ್ದಾರೆ. ಅದೃಷ್ಟವಶಾತ್ ಭದ್ರತಾ ಸಿಬ್ಬಂದಿ ಬೇಗನೆ ಮೈದಾನಕ್ಕೆ ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದು ಪಂದ್ಯವು ಯಾವುದೇ ಸಮಸ್ಯೆಗಳಿಲ್ಲದೆ ಮುಂದುವರಿಯಲು ಅವಕಾಶ ಮಾಡಿಕೊಟ್ಟರು.
— Drizzyat12Kennyat8 (@45kennyat7PM) February 24, 2025