
ಬಳ್ಳಾರಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿದ್ದು, ಬೆಂಕಿಯಿಂದ ಮನೆಯಲ್ಲಿದ್ದ ಎಲ್.ಪಿ.ಜಿ. ಸಿಲಿಂಡರ್ ಮತ್ತು ರೆಫ್ರಿಜರೇಟರ್ ಸ್ಪೋಟಗೊಂಡಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕೆ. ಸೂಗೂರಿನಲ್ಲಿ ಘಟನೆ ನಡೆದಿದೆ ವೀರೇಶ ಶೆಟ್ಟಿ ಎಂಬುವರ ಮನೆಯಲ್ಲಿ ಸಿಲಿಂಡರ್ ಮತ್ತು ರೆಫ್ರಿಜರೇಟರ್ ಸ್ಪೋಟವಾಗಿದೆ. ಮನೆಯ ಒಂದು ಬದಿಯಲ್ಲಿ ವೀರೇಶ ಶೆಟ್ಟಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ.
ಮನೆ ಹಾಗೂ ಕಿರಾಣಿ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ವೀರೇಶ ಕುಟುಂಬದವರು ಹರಸಾಹಸ ಪಟ್ಟು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆಯೇ ವೀರೇಶ್ ಶೆಟ್ಟಿಯವರ ಮನೆ, ಅಂಗಡಿ ಹೊತ್ತಿ ಉರಿದಿದ್ದು, ಅಂಗಡಿ, ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಸಿರಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.