
ಮಗಳ ಮದುವೆಯ ಸಂಭ್ರಮದಂದೇ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬಿಕ್ಕನೂರು ಗ್ರಾಮದ ರಾಮೇಶ್ವರಪಲ್ಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಬಾಲಚಂದ್ರಮಂ (56) ಮೃತ ವ್ಯಕ್ತಿ. ಮಗಳ ಮದುವೆಯೆಂದರೆ ತಂದೆಗೆ ಅದೆಷ್ಟು ಜವಾಬ್ದಾರಿ, ಒಂದೆಡೆಸಡಗರ, ಓಡಾಟ. ಮದುವೆ ಮಂಟಪದಲ್ಲಿ ತಯಾರಿ ನಡೆಸುತ್ತಿದ್ದ ವೇಳೆ ಏಕಾಏಕಿ ಬಾಲಚಂದ್ರಂ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕಾಮರೆಡ್ಡಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ಹೃದಯಾಘಾತದಿಂದ ಬಾಲಚಂದ್ರಂ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಬಾಲಚಂದ್ರಂ ಸಾವಿಗೂ ಮುನ್ನವೇ ಮದುವೆ ಮುಗಿದಿತ್ತು. ಕನ್ಯಾದಾನದ ಬಳಿಕ ಕುಸಿದುಬಿದ್ದವರು ಮೇಲೇಳಲೇ ಇಲ್ಲ. ಕೆಲ ಸಮಯದ ಹಿಂದೆ ಮದು ಸಂಭ್ರಮದಲ್ಲಿದ್ದ ಕುಟುಂಬ ದುಃಖದ ಮಡುವಲ್ಲಿ ಮುಳುಗಿದೆ.