ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗುರುವಾರ ರಾತ್ರಿ ದಲಿತ ವ್ಯಕ್ತಿಯೊಬ್ಬರ ಮದುವೆ ಮೆರವಣಿಗೆಯ ಮೇಲೆ ಸುಮಾರು 40 ಮೇಲ್ಜಾತಿಯ ಪುರುಷರು ದಾಳಿ ಮಾಡಿದ್ದಾರೆ. ಅತಿಥಿಗಳ ಮೇಲೆ ಜಾತಿ ನಿಂದನೆ ಮಾಡಿ ವರನನ್ನು ಬಲವಂತವಾಗಿ ಕುದುರೆಯಿಂದ ಕೆಳಗಿಳಿಸಿದ್ದಾರೆ. ಧಮ್ರಾವಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೆರವಣಿಗೆಯಲ್ಲಿ ಸಂಗೀತ ನುಡಿಸಿದ್ದಕ್ಕೆ ಹಿಂಸಾತ್ಮಕ ಘರ್ಷಣೆ ಉಂಟಾಗಿದೆ.
ವರ ಭಗವತ್ ಸಿಂಗ್ ಅವರ ಕುಟುಂಬದ ಪ್ರಕಾರ, ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಮೆರವಣಿಗೆಯನ್ನು ಠಾಕೂರ್ ಸಮುದಾಯದ ಪುರುಷರು ತಡೆದಿದ್ದು, ಬೇಕೆಂದೇ ಗಲಾಟೆ ತೆಗೆಯಲು ಜೋರಾಗಿ ಡಿಜೆ ಸಂಗೀತ ನುಡಿಸುತ್ತಿದ್ದೀರೆಂದು ಆಕ್ಷೇಪಿಸಿದ್ದಾರೆ. ಪುರುಷರು ಅತಿಥಿಗಳ ಮೇಲೆ ಕೋಲು, ಕಬ್ಬಿಣದ ಸರಳು ಮತ್ತು ಚೂಪಾದ ವಸ್ತುಗಳಿಂದ ದಾಳಿ ಮಾಡಿದ್ದು,, ಇದರಿಂದ ಅನೇಕರಿಗೆ ಗಾಯಗಳಾಗಿವೆ. ಮಹಿಳೆಯರು ಸೇರಿದಂತೆ ಆರು ಮಂದಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸಿದ್ದಾರೆ.
“ಜಾತಿ ನಿಂದನೆ ಮಾಡುತ್ತಾ, ಠಾಕೂರ್ ಸಮುದಾಯದ ಡಜನ್ಗಟ್ಟಲೆ ಜನರು – ಕೋಲು, ಕಬ್ಬಿಣದ ಸರಳು ಮತ್ತು ಚೂಪಾದ ವಸ್ತುಗಳಿಂದ ಅತಿಥಿಗಳ ಮೇಲೆ ದಾಳಿ ಮಾಡಿದರು ಮತ್ತು ವರನನ್ನು ಬಲವಂತವಾಗಿ ಕುದುರೆಯಿಂದ ಕೆಳಗಿಳಿಸಿದರು. ಮಹಿಳೆಯರು ಸೇರಿದಂತೆ ಆರು ಅತಿಥಿಗಳಿಗೆ ತಲೆಗೆ ಗಾಯಗಳಾಗಿವೆ. ಡಿಜೆ ಜೊತೆಗೆ ಮೆರವಣಿಗೆ ತಮ್ಮ ಪ್ರದೇಶದ ಮೂಲಕ ಹಾದುಹೋಗುವುದನ್ನು ಅವರು ವಿರೋಧಿಸಿದರು” ಎಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ರಿಜುಲ್ ಕುಮಾರ್ ನೇತೃತ್ವದ ಪೊಲೀಸರು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ ಐದು ಮಂದಿಯನ್ನು ಬಂಧಿಸಲಾಗಿದ್ದು ಮತ್ತು 30 ಗುರುತಿಸಲಾದ ವ್ಯಕ್ತಿಗಳು ಮತ್ತು ಕೆಲವು ಅಪರಿಚಿತ ದಾಳಿಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಗಲಭೆ, ಸ್ವಯಂಪ್ರೇರಿತ ನೋವುಂಟುಮಾಡುವುದು, ಉದ್ದೇಶಪೂರ್ವಕ ಅವಮಾನ ಮತ್ತು ದಲಿತರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದ ಎಸ್‌ಸಿ / ಎಸ್‌ಟಿ ಕಾಯ್ದೆ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಒಳಗೊಂಡಿದೆ.
A #Dalit man’s baraat (wedding procession) was allegedly attacked by around 40 upper caste men who hurled casteist slurs and pulled the groom – in full wedding dress – off the horse for passing through their locality and playing DJ music in #UttarPradesh‘s #Bulandshahr.… pic.twitter.com/6OpsX7ZiIl
— Hate Detector 🔍 (@HateDetectors) February 22, 2025