SBI ಕ್ರೆಡಿಟ್ ಕಾರ್ಡ್ ಸಿಬ್ಬಂದಿಯಿಂದ ಗ್ರಾಹಕರಿಗೆ ಅವಾಚ್ಯ ನಿಂದನೆ ! ವೈರಲ್ ಆಯ್ತು ʼಮೆಸೇಜ್ʼ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕ್ರೆಡಿಟ್ ಕಾರ್ಡ್ ಸಿಬ್ಬಂದಿಯೊಬ್ಬರು ಗ್ರಾಹಕರೊಬ್ಬರಿಗೆ ಅಸಭ್ಯವಾಗಿ ಸಂದೇಶ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ. ರತನ್ ಧಿಲ್ಲೋನ್ ಎಂಬ ಗ್ರಾಹಕರು ತಮಗೆ ಬಂದಿರುವ ಮೆಸೇಜ್‌ನ ಸ್ಕ್ರೀನ್‌ಶಾಟ್ ಅನ್ನು X (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಬಾಕಿ ಇರುವ ಕ್ರೆಡಿಟ್ ಕಾರ್ಡ್ ಪಾವತಿ ಕುರಿತು ಈ ಮೆಸೇಜ್ ಕಳುಹಿಸಲಾಗಿದೆ.

“ಇಂತಹ ಮೆಸೇಜ್ ಕಳುಹಿಸುವ ಧೈರ್ಯ ಹೇಗೆ ಬಂತು ನಂಬಲು ಸಾಧ್ಯವಿಲ್ಲ. ಈ ರೀತಿಯ ವರ್ತನೆ ಸ್ವೀಕಾರಾರ್ಹವಲ್ಲ, ಮತ್ತು ಬ್ಯಾಂಕ್ ನನಗೆ ಕ್ಷಮೆಯಾಚಿಸಬೇಕು. ಇದು ಸಂಪೂರ್ಣವಾಗಿ ಅಸಹ್ಯಕರ” ಎಂದು ರತನ್ ಧಿಲ್ಲೋನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಬಿಐ ಕಾರ್ಡ್, “ಕ್ಷಮಿಸಿ, ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ನಾವು ಇದನ್ನು ಗಮನಿಸಿದ್ದೇವೆ ಮತ್ತು ನಮ್ಮ ಪ್ರತಿನಿಧಿ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ” ಎಂದು ಹೇಳಿದೆ.

ಆದರೆ, ರತನ್ ಧಿಲ್ಲೋನ್, “ನನಗೆ ಈ ಸಂಭಾಷಣೆಯಲ್ಲಿ ಆಸಕ್ತಿ ಇಲ್ಲ, ಆದರೆ ನಿಮ್ಮ ಪ್ರತಿನಿಧಿ ಕರೆ ಮಾಡಿ ಅಸಹ್ಯವಾಗಿ ಮಾತನಾಡಿದ್ದಾರೆ ಮತ್ತು ನನ್ನ ಬಳಿ ರೆಕಾರ್ಡಿಂಗ್ ಕೂಡ ಇದೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ” ಎಂದು ಕಮೆಂಟ್ ಮಾಡಿದ್ದಾರೆ.

ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಗ್ರಾಹಕ ಸೇವಾ ಮಾನದಂಡಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

“ಈ ಭಾಷೆ ಎಸ್‌ಬಿಐನ ಗ್ರಾಹಕ ಸೇವೆಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ನಂತಿದೆ” ಎಂದು ಒಬ್ಬ ಬಳಕೆದಾರರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು ತಮಗೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು ಎಂದು ಕರೆ ರೆಕಾರ್ಡ್‌ಗಳು ಮತ್ತು ಇತರ ವಿವರಗಳನ್ನು ಹಂಚಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.

ಮೂರನೇ ಬಳಕೆದಾರರು, “ಇದು ‘ಅನಾನುಕೂಲತೆ’ ಅಲ್ಲ. ಇದು ಬ್ಯಾಂಕ್ ಯಾವ ಮಟ್ಟಕ್ಕೆ ಇಳಿದಿದೆ ಎಂಬುದರ ಪ್ರದರ್ಶನ. ವೃತ್ತಿಪರ ಮೌಲ್ಯಗಳು ಅಥವಾ ನೀತಿಗಳು ಇನ್ನುಳಿದಿಲ್ಲ ಎಂದು ತೋರುತ್ತದೆ” ಎಂದು ಕಮೆಂಟ್ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read