
ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿಗೆ ಬಂದಿದ್ದ ವೇಳೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರಿಗೆ ಒದಗಿಸಿದ್ದ ಬೆಂಗಾವಲು ಪಡೆಯ ಹೆಡ್ ಕಾನ್ಸ್ ಟೇಬಲ್ ಮೇಲೆ ಬೈಕ್ ಹತ್ತಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಹಮದ್ ದಿಲ್ವಾರ್ ಹುಸೇನ್ ಬಂಧಿತ ಆರೋಪಿ. ಫೆ.9ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದರು. ಅವರು ತೆರಳುತ್ತಿದ್ದ ಮಾರ್ಗದಲ್ಲಿ ಬಂದೀಬಸ್ತ್ ಕಲ್ಪಿಸಲಾಗಿತ್ತು. ಅದು ಮಧ್ಯಾಹ್ನ ಅನಿಲ್ ಕುಂಬ್ಳೆ ವೃತ್ತದಲ್ಲಿ ತೆರಳುತ್ತಿದ್ದ ವೇಳೆ ಬೆಂಗಾವಲು ಪಡೆಗೆ ಆರೋಪಿ ಅಡ್ಡಬಂದಿದ್ದ. ಆತನನ್ನು ತಡೆಯಲು ಯತ್ನಿಸಿದ್ದ ಹೆಡ್ ಕಾನ್ಸ್ ಟೇಬಲ್ ದಿನೇಶ್ ಮೇಲೆ ಬೈಕ್ ಹತ್ತಿಸಿದ್ದ.
ಗಾಯಗೊಂಡಿದ್ದ ದಿನೇಶ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇದೀಗ ಆರೋಪಿ ಅಹಮದ್ ದಿಲ್ವಾರ್ ನನ್ನು ಬಂಧಿಸಲಾಗಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.