ಬೆಂಗಳೂರು : ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಮತ್ತು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೇ 10ರ ವರೆಗೆ ಇ-ಖಾತಾ ಅಭಿಯಾನ ಆರಂಭಿಸಲಾಗಿದೆ. ಸಂಬಂಧಪಟ್ಟ ದಾಖಲೆಗಳೊಂದಿಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತೆ ಪಡೆದುಕೊಳ್ಳಬಹುದು.
ಇ-ಖಾತಾ ಪಡೆಯಲು ಸರಳ ವಿಧಾನಗಳು
1 ಸರ್ಕಾರದಿಂದ ವಿತರಿಸಿದ ಯಾವುದೇ ಬಗೆಯ ಗುರುತಿನ ಚೀಟಿ
2 ಆಸ್ತಿ ಮಾಲೀಕರ ಫೋಟೊ
3 ಮಾಲೀಕತ್ವ ದೃಢೀಕರಿಸುವ ನೋಂದಾಯಿತ ದಾಖಲೆಗಳು
4. ಸ್ವತ್ತಿನ ಋಣಭಾರ ಪ್ರಮಾಣ ಪತ್ರ
5 ಸ್ವತ್ತಿನ ಛಾಯಾಚಿತ್ರ
6 ಆಸ್ತಿ ತೆರಿಗೆ ಪಾವತಿಸಿದ ರಶೀದಿ
ಈ ಮೇಲಿನ ದಾಖಲೆಗಳೊಂದಿಗೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತೆ ದಾಖಲೆಯನ್ನು ಪಡೆದುಕೊಳ್ಳಬಹುದು. ಈಗಾಗಲೇ ಇರುವ ಕೈಬರಹ ಖಾತೆಗೆ ಇ-ಖಾತಾ ಪಡೆಯಿರಿ.
ಸಹಾಯವಾಣಿ
080-23003100