
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನಿಗೆ ಮುಂಬೈ ಮೂಲದ ಭಕ್ತರೊಬ್ಬರು 11 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಪ್ರಸೀದ್ ಉನೋ ಫ್ಯಾಮಿಲಿ ಟ್ರಸ್ಟ್ ನ ತುಷಾರ್ ಕುಮಾರ್ ಅವರು ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟಿಗೆ 11 ಕೋಟಿ ರೂ. ನೀಡಿದ್ದಾರೆ. 1985 ರಲ್ಲಿ ಮುಖ್ಯಮಂತ್ರಿ ಆಗಿದ್ದ ಎನ್.ಟಿ. ರಾಮರಾವ್ ಅವರು ವೆಂಕಟೇಶ್ವರ ನಿತ್ಯ ಅನ್ನದಾನಂ ದತ್ತಿ ಯೋಜನೆ ಆರಂಭಿಸಿದ್ದರು. 2014ರಲ್ಲಿ ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್ ಎಂದು ಇದನ್ನು ಮರುನಾಮಕರಣ ಮಾಡಲಾಗಿತ್ತು. ಈ ಟ್ರಸ್ಟ್ ವತಿಯಿಂದ ತಿರುಪತಿಗೆ ಆಗಮಿಸುವ ಭಕ್ತರಿಗೆ ಪ್ರತಿದಿನ ಮೂರು ಹೊತ್ತು ಪ್ರಸಾದ ವಿತರಿಸಲಾಗುತ್ತದೆ. ಅನ್ನಪ್ರಸಾದ ಕೇಂದ್ರದಲ್ಲಿರುವ ಅಡುಗೆ ಮನೆಯಲ್ಲಿ ಪ್ರತಿದಿನ 14 ಟನ್ ಅನ್ನ ತಯಾರಿಸಲಾಗುತ್ತದೆ. 10 ಸಾವಿರ ಲೀಟರ್ ಹಾಲು ಬಳಕೆ ಮಾಡಲಾಗುತ್ತದೆ. ಈ ಟ್ರಸ್ಟಿಗೆ ತುಷಾರ್ ಕುಮಾರ್ ಅವರು 11 ಕೋಟಿ ರೂ. ದೇಣಿಗೆ ನೀಡಿದ್ದಾರೆ.