ಚಾಮರಾಜನಗರದ ಬೇಕರಿಯೊಂದರಲ್ಲಿ ಹೃದಯಾಘಾತದಿಂದ ನೌಕರರೊಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಗ್ರಾಹಕರಿಗೆ ಸಿಹಿ ನೀಡುವಾಗ ಕುಸಿದು ಬಿದ್ದ ನೌಕರ ಸಾವನ್ನಪ್ಪಿದ್ದಾರೆ.
ಫೆಬ್ರವರಿ 12 ರಂದು ಸಂಜೆ 7:30 ರ ಸುಮಾರಿಗೆ ಚಾಮರಾಜನಗರದ ಕೇಕ್ ವರ್ಲ್ಡ್ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಕೇರಳದ ಮೂಲದ ವೆಂಕಟೇಶ್ (56) ಕಳೆದ ಐದು ವರ್ಷಗಳಿಂದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ಗ್ರಾಹಕರಿಗೆ ಸಿಹಿ ಪೊಟ್ಟಣಗಳನ್ನು ನೀಡುವಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಈ ಆಘಾತಕಾರಿ ಘಟನೆ ಸಾರ್ವಜನಿಕರ ಕಣ್ಣೆದುರೇ ನಡೆದಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ.
ವೆಂಕಟೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಚಾಮರಾಜನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಆಘಾತವನ್ನುಂಟು ಮಾಡುವಂತಿದೆ.
A tragic incident occurred at Cake World Bakery in Chamarajanagar, where a 56-year-old employee, Venugopal, suffered a fatal heart attack while parceling sweets for customers. Venugopal, a native of Kerala, had been working at the bakery for the past five years. On the evening of… pic.twitter.com/sc3IcMeBhr
— Karnataka Portfolio (@karnatakaportf) February 14, 2025