
ಬೆಂಗಳೂರು: ಎಪಿಎಲ್ ಕುಟುಂಬ ಸದಸ್ಯರಿಗೂ ರಾಜ್ಯದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಕೆ.ಎಫ್.ಡಿ.ಗೆ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ.
ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆ.ಎಫ್.ಡಿ.) ಬಾಧಿತ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಉಚಿತವಾಗಿ ಇದುವರೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮಧ್ಯಮ ವರ್ಗದ ಕುಟುಂಬಗಳು ಇಂತಹ ಸೌಲಭ್ಯದಿಂದ ವಂಚಿತರಾಗುತ್ತಿದ್ದನ್ನು ಮನಗಂಡ ಆರೋಗ್ಯ ಇಲಾಖೆ ಆಯುಷ್ಮಾನ್ ಭಾರತ್ ಯೋಜನೆಯಡಿ ಎಪಿಎಲ್ ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡಲು ಆದೇಶಿಸಿದೆ.
ಇದರಿಂದಾಗಿ ಕೆ.ಎಫ್.ಡಿ. ಬಾಧಿತ ಬಿಪಿಎಲ್ ಕುಟುಂಬಗಳ ರೀತಿಯಲ್ಲಿ ಎಪಿಎಲ್ ಕುಟುಂಬದವರು ಕೂಡ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಪಡೆದುಕೊಳ್ಳಬಹುದು. ಪಶ್ಚಿಮ ಘಟ್ಟ ಪ್ರದೇಶದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆ.ಎಫ್.ಡಿ. ಬಾಧಿಸುತ್ತಿದ್ದು, 2003 ರಿಂದ ಸುಮಾರು 59 ಮಂದಿ ಮೃತಪಟ್ಟಿದ್ದಾರೆ.