![](https://kannadadunia.com/wp-content/uploads/2022/09/drowned-death-3x2_0.jpg)
ಮಡಿಕೇರಿ: ಪುಸ್ತಕ ತರುವುದಾಗಿ ಹೇಳಿ ತರಗತಿಯಿಂದ ಎದ್ದುಹೋಗಿದ್ದ ನವೋದಯ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.
ಅಮಿತ್ (17) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಫೆ.11ರಂದು ಬೆಳಿಗ್ಗೆ ಇಂಗ್ಲೀಷ್ ಪುಸ್ತಕ ತರುವುದಾಗಿ ಹೇಳಿ ಕ್ಲಾಸ್ ರೂಂ ನಿಂದ ಎದ್ದು ಹೋಗಿದ್ದ ವಿದ್ಯಾರ್ಥಿ ನಾಪತ್ತೆಯಾಗಿದ್ದ. ನಿನ್ನೆ ಕೂಟುಪೊಳೆ ಬಳಿ ಅಮಿತ್ ಚಪ್ಪಲಿ ಪತ್ತೆಯಾಗಿತ್ತು. ಇಂದು ಕೂಟುಪೊಳೆ ನದಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.
ನದಿಗೆ ಹಾರಿ ವಿದ್ಯಾರ್ಥಿ ಅಮಿತ್ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ. ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.