![](https://kannadadunia.com/wp-content/uploads/2022/02/attack.gif)
ಪತ್ನಿ ಮೇಲಿನ ಸಂಶಯಕ್ಕೆ ಪತಿಯೊಬ್ಬ ಆಕೆಯ ಕಣ್ಣುಗುಡ್ಡೆಗಳನ್ನು ಕಿತ್ತು ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.
ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಅನುಮಾನಕ್ಕೆ ಕೋಪಗೊಂಡು ಚಾಕುವಿನಿಂದ ಆಕೆಯ ಎರಡೂ ಕಣ್ಣುಗುಡ್ಡೆಗಳನ್ನು ಕಿತ್ತಿದ್ದಾನೆ. ಅಲ್ಲದೇ ಖಾಸಗಿ ಭಾಗಗಳನ್ನು ಗಾಯಗೊಳಿಸಿ, ಹಲ್ಲೆ ನಡೆಸಿದ್ದಾನೆ. ಪತಿಯ ವಿಕೃತ ಅಟ್ಟಹಾಸಕ್ಕೆ ಪತ್ನಿ ಸ್ಥಿತಿ ಗಂಭೀರವಾಗಿದೆ.
ದಂಪತಿ ಮದುವೆಯಾಗಿ ಮೂರು ವರ್ಷಗಳಾಗಿದ್ದವು. ಪತ್ನಿ ಮೇಲಿನ ಅನುಮಾನಕ್ಕೆ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಸಂಶಯಕ್ಕೆ ಪತ್ನಿಯ ಮೊಬೈಲ್ ನೋಡಲೆಂದು ಆಕ ಬಳಿ ಮೊಬೈಲ್ ಕೊಡುವಂತೆ ಕೇಳಿದ್ದಾನೆ. ಅದಕ್ಕೆ ಮೊಬೈಲ್ ಕೊಡಲು ಪತ್ನಿ ನಿರಾಕರಿಸಿದ್ದಾಳೆ. ಇದನ್ನೇ ನೆಪ ಮಾಡಿಕೊಂಡು ಮನಬಂದಂತೆ ಹಲ್ಲೆ ನಡೆಸಿರುವ ಪತಿ, ಆಕೆಯ ಕಣ್ಣುಗುಡ್ದೆಗಳನ್ನು ಕಿತ್ತಿದ್ದಾನೆ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ಪತ್ನಿ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕಾಗಮಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಚೋಟು ಖಾನ್ ಎಂದು ಗುರುತಿಸಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಪತ್ನಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.