ಫೆಬ್ರವರಿ 6 ರ ಗುರುವಾರ ಹಯಾತ್‌ನಗರದ ಪೆಡ್ಡಾ ಅಂಬರ್‌ಪೇಟ್‌ನ ಹನುಮಾನ್ ಬೆಟ್ಟಗಳಲ್ಲಿ ನಾಲ್ಕು ವರ್ಷದ ಎಲ್‌ಕೆಜಿ ವಿದ್ಯಾರ್ಥಿನಿ ಬಿ ರಿತ್ವಿಕಾ ಶಾಲಾ ವ್ಯಾನ್‌ನಿಂದ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಚಾಲಕ ವ್ಯಾನ್ ಅನ್ನು ಹಿಮ್ಮುಖವಾಗಿ ಚಲಾಯಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಿತ್ವಿಕಾ ಇಳಿಯುತ್ತಿದ್ದನ್ನು ಗಮನಿಸದ ಚಾಲಕ ಆಕೆಯ ಮೇಲೆ ವಾಹನ ಚಲಾಯಿಸಿದ್ದಾನೆ. ಆಕೆ ಹಿಂಬದಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆಯ ನಂತರದ ಸಿಸಿ ಟಿವಿ ದೃಶ್ಯಾವಳಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಮೂವರು ಪುರುಷರು ಮಗುವನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ತೋರಿಸುತ್ತದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.