ತುಮಕೂರು: ರಾಜ್ಯದಲ್ಲಿ ವೈರಲ್ ಫೀವರ್ ಜೊತೆಗೆ ಡೆಂಘೀ ಸೋಂಕು ಮತ್ತೆ ಶುರುವಾಗಿದ್ದು, 7 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯಲ್ಲಿ ಬಾಲಕನೊಬ್ಬ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾನೆ. ಪಾವಗಡ ಪಟ್ಟಣದ ಬಾಬೈಯ್ಯನ ಗುಡಿಬೀದಿ ನಿವಾಸಿ ಕರುಣಾಕರ (7) ಮೃತ ಬಾಲಕ.
ಡೆಂಘೀ ಜ್ವರದಿಂದ ಬಳಲುತ್ತಿದ್ದ ಬಾಲಕ ಕಳೆದ 8 ದಿನಗಳಿಂದ ಪಾವಗಡದ ಸುಧಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಇಂದು ಬಾಲಕ ಕೊನೆಯುಸಿರೆಳೆದಿದ್ದಾನೆ. ಬಾಲಕ ಡೆಂಘೀಯಿಮ್ದ ಬಳಲುತ್ತಿದ್ದರೂ ವೈದ್ಯರು ಕೊನೇ ಕ್ಷಣದವರೆಗೂ ಡೆಂಘೀ ಜ್ವರ ಎಂಬುದನ್ನು ತಿಳಿಸಿರಲಿಲ್ಲ ಎನ್ನಲಾಗಿದೆ. ವೈದ್ಯರ ನಿರ್ಲಕ್ಷದಿಂದಲೇ ಬಾಲಕ ಸಾವನ್ನಪ್ಪಿದ್ದಾಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.