alex Certify ಸ್ಥೂಲಕಾಯಕ್ಕೆ ಆಹಾರವೊಂದೇ ಅಲ್ಲ ಇವುಗಳೂ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಥೂಲಕಾಯಕ್ಕೆ ಆಹಾರವೊಂದೇ ಅಲ್ಲ ಇವುಗಳೂ ಕಾರಣ

ಪ್ರತಿಯೊಬ್ಬ ವ್ಯಕ್ತಿಯೂ ಫಿಟ್ ಇರಲು ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೂ ಹೊಟ್ಟೆ ಬರುತ್ತಿರುತ್ತೆ. ಆಗ ಮಾಡಿದ ಕಸರತ್ತೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕೆಲವೊಬ್ಬರಿಗೆ ಜಿಮ್, ಡಯಟ್ ಮಾಡಲು ಸಮಯವಿರೋದಿಲ್ಲ. ಅಂತವರು ಕೆಲವೊಂದು ಸುಲಭ ಟಿಪ್ಸ್ ಅನುಸರಿಸಿ ಹೊಟ್ಟೆ ಕರಗಿಸಿಕೊಳ್ಳಬಹುದು.

ಬೊಜ್ಜು ಹೊಟ್ಟೆಗೆ ಅತಿಯಾಗಿ ತಿನ್ನುವುದು ಹಾಗೂ ವ್ಯಾಯಾಮ ಮಾಡದಿರುವುದು ಮಾತ್ರ ಕಾರಣವಲ್ಲ. ಇದಕ್ಕೆ ನೀವು ಕುಳಿತುಕೊಳ್ಳುವ ಭಂಗಿ ಕೂಡ ಕಾರಣವಾಗುತ್ತದೆ. ತುಂಬಾ ಸಮಯ ಕುಳಿತುಕೊಳ್ಳುವುದರಿಂದ ಹೊಟ್ಟೆ ಬೊಜ್ಜು ಬರುತ್ತದೆ. ಹಾಗಾಗಿ ಕುಳಿತುಕೊಳ್ಳುವ ಭಂಗಿ ಬಗ್ಗೆ ಗಮನವಿರಲಿ. ಸರಿಯಾಗಿ ಕುಳಿತುಕೊಳ್ಳಲು ಅಭ್ಯಾಸ ಮಾಡಿಕೊಳ್ಳಿ.

ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡುವುದು ಮಹತ್ವ ಪಡೆಯುತ್ತದೆ. ಪ್ರತಿದಿನ ಒಂದೇ ಸಮಯದಲ್ಲಿ ಆಹಾರ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿ ಎರಡು ಗಂಟೆಗೆ ಪ್ರೋಟೀನ್ ಯುಕ್ತ ಹಾಗೂ ಕಡಿಮೆ ಕೊಬ್ಬಿನ ಉತ್ಪನ್ನಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು.

ಬೊಜ್ಜು ಹೊಟ್ಟೆ ಸಮಸ್ಯೆಯುಳ್ಳವರು ಫೈಬರ್ ಆಹಾರವನ್ನು ಸೇವನೆ ಮಾಡಬೇಕು. ಇದು ತುಂಬಾ ಸಮಯ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಜೊತೆಗೆ ಸುಲಭವಾಗಿ ಜೀರ್ಣವಾಗುತ್ತದೆ. ಸೇಬು, ಬೀನ್ಸ್, ಕಿತ್ತಳೆ ಹಣ್ಣಿನಲ್ಲಿ ಫೈಬರ್ ಅಂಶ ಜಾಸ್ತಿಯಿರುತ್ತದೆ.

ಬಿಳಿ ಉಪ್ಪು ಬೇಡ. ಬಿಳಿ ಉಪ್ಪು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಕಪ್ಪು ಉಪ್ಪು ಬಳಕೆಯನ್ನು ಅಭ್ಯಾಸ ಮಾಡಿಕೊಳ್ಳಿ. ಬಿಳಿ ಉಪ್ಪು ಬೊಜ್ಜು ಹೊಟ್ಟೆಗೆ ಕಾರಣವಾಗುತ್ತದೆ. ಹಾಗೆ ಹೊಟ್ಟೆ ಭಾರವಾದ ಅನುಭವವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...