ರಾಯಚೂರು: ಮನೆಯ ಪೇಂಟಿಂಗ್ ಗೆಂದು ತಂದಿದ್ದ ಥಿನ್ನರ್ ಕುಡಿದು 3 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಹಿರೇಕೋಟ್ನೇಕರ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಾತ್ರೆ ಹಿನ್ನೆಲೆಯಲ್ಲಿ ಮನೆ ಪೇಂಟಿಂಗ್ ಮಾಡಲೆಂದು ಸಿದ್ಧತೆ ನಡೆಸಲಾಗಿತ್ತು. ಪೇಂಟಿಂಗ್ ಗೆ ಬಳಸುವ ಥಿನ್ನರ್ ಬಾಲಕನ ಕೈಗೆ ಸಿಕ್ಕಿದ್ದು, ಆಕಸ್ಮಿಕವಾಗಿ ಥಿನ್ನರ್ ಸೇವಿಸಿದ ಬಾಲಕ ತೀವ್ರವಾಗಿ ಅಸ್ವಸ್ಥನಾಗಿದ್ದ. ಬಾಲಕನನ್ನು ಮಾನ್ವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಕೊನೆಯುಸಿರೆಳೆದಿದ್ದಾನೆ.
ರಮೇಶ್ ನಾಯಕ್ ಪುತ್ರ ಶಿವಾರ್ಜುನ (3) ಮೃತ ಬಾಲಕ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.