ಉಡುಪಿ: ಬೈಂದೂರು ಏತ ನೀರಾವರಿ ಸಭೆ ವೇಳೆ ಗಲಾಟೆ ನಡೆದಿದ್ದು, ರೈತ ಮುಖಂದರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಸಭೆಯಲ್ಲಿ ರೈತರ ಎರಡು ತಂಡಗಳ ನಡುವೆ ಸಂಘರ್ಷ ನಡೆದಿದೆ. ಹೇರಂಜಾಲು ಏತ ನೀರಾವರಿ ಯೋಜನೆ ಪ್ವೈಫಲ್ಯ, ಸ್ಥಳೀಯ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಸಭೆ ವೇಳೆ ಗಲಾಟೆ ಆರಂಭವಾಗಿದೆ.
ರೈತ ಮುಖಂಡರು ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ. ಸಭೆಯಲ್ಲಿಯೇ ನೂಕಾಟ, ತಳ್ಳಾಟ ಆರಂಭವಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ತಕ್ಷಣ ಪೊಲೀಸರು ಮಧ್ಯಪ್ರವೇಶ ಮಾಡಿ ರೈತ ಮುಖಂಡರನ್ನು ಸಮಾಧಾನಪಡಿಸಿದ್ದಾರೆ.
ಅಧಿಕಾರಿಗಳು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ರೈತ ಮುಖಂಡರಾದ ಎಸ್.ಪ್ರಕಾಶ್ ಚಂದ್ರ ಶೆಟ್ಟಿ ತರಾಟೆಗೆ ತೀದುಕೊಂಡರು. ಈ ವೇಳೆ ಮತ್ತೊಂದು ರೈತ ತಂಡದ ಮುಖಂಡರು ಅವರ ಕೈಯಿಂದ ಮೈಕ್ ಕಿತ್ತುಕೊಂಡಅರು. ಈ ವೇಳೆ ಎಳೆದಾಟ, ತಳ್ಳಾಟ ನಡೆದು ಗಲಾಟೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.