alex Certify ʼರಾಪಿಡೋʼ ರೈಡ್ ಬಳಿಕ ಚಾಲಕನಿಂದ ಕಿರುಕುಳ; ʼರೆಡ್ಡೀಟ್‌ʼ ನಲ್ಲಿ ಅನುಭವ ಹಂಚಿಕೊಂಡ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಾಪಿಡೋʼ ರೈಡ್ ಬಳಿಕ ಚಾಲಕನಿಂದ ಕಿರುಕುಳ; ʼರೆಡ್ಡೀಟ್‌ʼ ನಲ್ಲಿ ಅನುಭವ ಹಂಚಿಕೊಂಡ ಯುವತಿ

ರಾಪಿಡೋ ಚಾಲಕನೊಬ್ಬ ಯುವತಿಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ‘ಅಲೂಗೊಬಿ’ ಎಂಬ ರೆಡ್ಡಿಟ್ ಬಳಕೆದಾರ ಹೆಸರಿನಡಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಯುವತಿ, ತನ್ನನ್ನು ಡ್ರಾಪ್ ಮಾಡಿದ ನಂತರ ಚಾಲಕ ಡಜನ್‌ಗಟ್ಟಲೆ ಅನಗತ್ಯ ಕರೆ ಮತ್ತು ವಾಟ್ಸಾಪ್‌ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಯುವತಿ ರಾಪಿಡೋದಲ್ಲಿ ರೈಡ್ ಬುಕ್ ಮಾಡಿದಾಗ ಈ ಘಟನೆ ಸಂಭವಿಸಿದ್ದು, ಆರಂಭದಲ್ಲಿ, ಚಾಲಕ ಆಕೆಯನ್ನು ಸರಿಯಾದ ಸ್ಥಳದಲ್ಲಿ ಇಳಿಸಿದ್ದಾನೆ, ಆದರೆ ಆಕೆ ಹಣ ಪಾವತಿಸುವಾಗ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಾಗ ಪರಿಸ್ಥಿತಿ ಅಹಿತಕರವಾಗಿದೆ.

ಯುವತಿ, ಚಾಲಕನೊಂದಿಗೆ ಸ್ವಲ್ಪ ಹೊತ್ತು ಮಾತುಕತೆಯಲ್ಲಿ ತೊಡಗಿದ್ದು, ಅವನ ಪ್ರಶ್ನೆಗಳಿಗೆ ಸಭ್ಯವಾಗಿ ಉತ್ತರಿಸಿದ್ದೆ ಎಂದು ಹೇಳಿದ್ದಾರೆ. ಆದರೆ ಚಾಲಕ ಆಕೆಯ ನೋಟ ಮತ್ತು ವೈವಾಹಿಕ ಸ್ಥಿತಿಯ ಬಗ್ಗೆ ಕಾಮೆಂಟ್ ಮಾಡಿದಾಗ ಸಂಭಾಷಣೆ ವಿಕೋಪಕ್ಕೆ ಹೋಗಿದೆ. ಚಾಲಕ ತನ್ನನ್ನು ‘ಭಯ್ಯಾ’ ಎಂದು ಕರೆಯದಂತೆ ಒತ್ತಾಯಿಸಿದ್ದಲ್ಲದೇ ಸಾಮಾಜಿಕ ಮಾಧ್ಯಮದ ವಿವರಗಳನ್ನು ಕೇಳಿದ್ದಾನೆ. ಆಗ, ತಾನು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ ಎಂಬ ನೆಪ ಹೇಳಿ ಅಲ್ಲಿಂದ ಹೊರಟುಹೋಗಿದ್ದಾರೆ.

ಆದರೆ ಕಷ್ಟಗಳು ಅಲ್ಲಿಗೆ ಮುಗಿದಿಲ್ಲ. ಮರುದಿನ, ಚಾಲಕ ತನಗೆ ಹಲವಾರು ಬಾರಿ ಕರೆ ಮಾಡಿದ್ದಲ್ಲದೇ ವಾಟ್ಸಾಪ್‌ ಸಂದೇಶಗಳನ್ನು ಕಳುಹಿಸಿ ನನ್ನ ಗೌಪ್ಯತೆಯನ್ನು ಉಲ್ಲಂಘಿಸಿದ್ದಾನೆ ಎಂದು ಯುವತಿ ದೂರಿದ್ದಾರೆ.

ಯುವತಿ ಈಗ ರಾಪಿಡೋ ಗ್ರಾಹಕ ಬೆಂಬಲ ತಂಡಕ್ಕೆ ಔಪಚಾರಿಕ ದೂರು ಸಲ್ಲಿಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ, ರಾಪಿಡೋ ಗ್ರಾಹಕ ಸೇವಾ ತಂಡವು, ವಿಷಯವನ್ನು ತನಿಖೆ ಮಾಡಿ ಚಾಲಕನನ್ನು ವೇದಿಕೆಯಿಂದ ನಿಷೇಧಿಸಿದ್ದಾರೆ ಎಂದು ಆಕೆಗೆ ಭರವಸೆ ನೀಡಿದೆ.

ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ವ್ಯಾಪಕ ಆಕ್ರೋಶ ಮತ್ತು ಕಾಳಜಿಯನ್ನು ಹುಟ್ಟುಹಾಕಿದೆ. ಅನೇಕರು ರೈಡ್-ಹೇಲಿಂಗ್ ಸೇವೆಗಳಿಗೆ ಕಠಿಣ ಹಿನ್ನೆಲೆ ತಪಾಸಣೆಗಳು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಒತ್ತಾಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...