ಗೋಕಾಕ್: ಕಬ್ಬು ಕಟಾವ್ ಮಾಡಲೆಂದು ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಯ ಗೋಕಾಕ್ ಗೆ ಬಂದಿದ್ದ ದಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಮೀರಾಬಾಯಿ ಜಂಗಲೆಯ (30) ಪತಿಯಿಂದಲೇ ಕೊಲೆಯಾದ ಪತ್ನಿ. ಬಾಲಾಜಿ ಜಂಗಲೆ (40) ಪತ್ನಿ ಕೊಂದ ಕೊಲೆಗಾರ. ಮಹಾರಾಷ್ಟ್ರ ಮೂಲದ ಚಂಬುರ್ದರಾ ಗ್ರಾಮದ ಬಾಲಾಜಿ ಹಾಗೂ ಮೀರಾ ದಂಪತಿ ಕಬ್ಬು ಕಟಾವ್ ಮಾಡಲೆಂದು ತಮ್ಮ ತಂಡದವರ ಜೊತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮಕ್ಕೆ ಬಂದಿದ್ದಾರೆ. ಪತಿ ಬಾಲಾಜಿ ಕುಡಿದುಬಂದು ಕೆಲಸ ಮಾಡುತ್ತಿದ್ದ. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳ ಆರಂಭವಾಗಿದೆ.
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ಬಾಲಾಜಿ ಜಂಗಲೆ ಕಲ್ಲಿನಿಂದ ಪತ್ನಿಯ ತಲೆಯ ಮೇಲೆ ಜಜ್ಜಿದ್ದಾನೆ. ಸ್ಥಳದಲ್ಲೇ ಪತ್ನಿ ಸಾವನ್ನಪ್ಪಿದ್ದಾರೆ. ಗೋಗಾಕ್ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ.